District news: ಗುಡ್ಡಗಾಡು ಪ್ರದೇಶಗಳಲ್ಲಿ ವಾಹನವನ್ನು ಚಲಾಯಿಸಬೇಕೆಂದರೆ ಜೀವವನ್ನೇ ಪಣಕ್ಕಿಟ್ಟು ಹಾಗೂ ಮೈಯಲ್ಲಾ ಕಣ್ಣಾಗಿಸಿಕೊಂಡು ಓಡಿಸಬೇಕು ಇಲ್ಲದಿದ್ದರೆ ಒಂದು ಕ್ಷಣ ಮೈಮರೆತರೆ ಪ್ರಾಣಪಕ್ಷಿ ಹಾರಿಹೋಗುವುದು ಖಂಡಿತ ಅಂತದರಲ್ಲಿ ಇಷ್ಟೊಂದು ಸಮಸ್ಯೆಇರುವ ಜಾಗಗಳಲ್ಲಿ ವಾಹನಗಳು ಯೂವುದೇ ಭಯವಿಲ್ಲದೆ ಓಡಾಡಲಿ ಎಂದು ಸರ್ಕಾರ ರಸ್ತೆಯ ಪಕ್ಕದಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡುತ್ತದೆ. ಆದರೆ ಇಲ್ಲಿ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷವಾಗಿದೆ ಆದರೆ ಪೂರ್ಣವಾಗಿಲ್ಲ.
ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ 3 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿರುವ ಚಾರ್ಮಾಡಿ ಘಾಟಿನಲ್ಲಿ 2 ವರ್ಷವಾದರೂ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಇಲ್ಲಿನ ರಸ್ತೆ ಯೋಗ್ಯವಾಗಿದ್ದರೂ ಕೆಲವೊಂದು ಕಡೆಗಳಲ್ಲಿ ವಾಹನ ಸವಾರರಿಗೆ ಅಪಾಯವನ್ನು ಆಹ್ವಾನಿಸುವಂತಿದೆ. ಮಂಜು ಮುಸುಕಿದ ವಾತಾವರಣದಲ್ಲಿ ಇಲ್ಲಿ ವಾಹನ ಚಲಾಯಿಸುವುದು ಬಹಳ ಸವಾಲಿನ ಕಾರ್ಯವಾಗಿದೆ. ರಾತ್ರಿವೇಳೆಯಂತೂ ಇಲ್ಲಿ ಬಹಳ ಜಾಗರೂಕರಾಗಿರಬೇಕಾದ ಪರಿಸ್ಥಿತಿಯಿದೆ.
ಇನ್ನು ಈಕಡೆ ಇಲ್ಲಿಯವರೆಗೂ ಸಂಬಂಧ ಪಟ್ಟ ಅಧಿಕಾರಿಗಳೂ ಇದುವರೆಗೂ ತಲೆಹಾಕದಿರುವುದು ನೋಡಿದರೆ ಸಾರ್ವಜನಿಕರ ಜೀವಕ್ಕೆ ಬೆಲೆನೆ ಇಲ್ಲವೆಂದು ತೋರುತ್ತದೆ.
Narendra Modi : ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಎಮ್ಯಾನುಯೆಲ್ ಮ್ಯಾಕ್ರೋನ್
Madhva Vadiraja : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಯೋಜನೆಗೆ ಸರ್ಕಾರದಿಂದ ಧನಸಹಾಯ