Youtube:ಸಾಮಾಜಿಕ ಜಾಲತಾಣದಿಂದ ಈಗ ಸುಲಭವಾಗಿ ದುಡ್ಡು ಸಂಪಾದನೆ ಮಾಡುತ್ತಿದ್ದಾರೆ. ತಮ್ಮಲ್ಲಿರುವ ಒಳ್ಳೆಯ ವಿಚಾರಗಳಿಂದ ತಮ್ಮ ವಿಭಿನ್ನ ಮಾತಿನ ಶೈಲಿಗಳಿಂದ ಜನರನ್ನು ಆಕರ್ಷಿಸುತ್ತಾರೆ. ಜನರು ಅವರನ್ನು ಹಿಂಬಾಲಿಸುತ್ತಾರೆ. ಹೆಚ್ಚು ಹೆಚ್ಚು ವೀಕ್ಷಿಸುತ್ತಾರೆ. ಇದರಿಂದ ಯೂಟ್ಯೂಬರ್ ಗಳು ಸಾಕಷ್ಟು ಹಣ ಗಳಿಸುತ್ತಾರೆ. ಆದರೆ ಇದರಿಂದ ಲಕ್ಷ ಲಕ್ಷ ಹಣಗಳಿಸುತ್ತಿರುವ ಯೂಟ್ಯೂಬರ್ ತಸ್ಲಿಮಾ ಎನ್ನುವವರ ವಿರುದ್ದ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬ ಆರೋಪದಡಿ ದಾಳಿಗೆ ಒಳಗಾಗಿದ್ದಾರೆ.
ಟ್ರೇಡಿಂಗ್ ಹಬ್ 3.0 ಎಂಬ ಯೂಟ್ಯೂಬ್ ಚಾನಲ್ ಮೂಲಕ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವೀಡಿಯೋಗಳನ್ನು ಮಾಡುತ್ತಿರುವ ತಸ್ಲಿಮಾ ಅವರಿಗೆ 99.7 ಸಾವಿರ ಮಂದಿ ಬೆಂಬಲಿಗರಿದ್ದಾರೆ. ಇವರು ತಮ್ಮ ಚಾನೆಲ್ ನಿಂದ 1.2 ಕೋಟಿ ಹಣ ಗಳಿಸುತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನಾಲ್ಕು ಲಕ್ಷ ತೆರಿಗೆಯನ್ನು ಕಟ್ಟಿದ್ದೇವೆ ನಾವು ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಮಾಡಿಲ್ಲ ನಾವು ಉತ್ತಮ ರೀತಿಯಲ್ಲಿ ಆದಾಯಗಳಿಸಲು ಈ ಚಾನೆಲ್ ನಡೆಸುತಿದ್ದೇವೆ. ಈ ದಾಳಿ ಯಾರೋ ನಮಗೆ ಆಗದವರು ಬೇಕು ಅಂತಾನೆ ಮಾಡಿರುವ ದೂರು ಎಂದು ಸಹೋದರ ಫಿರೋಜ್ ಹೇಳಿದ್ದಾರೆ. ತಸ್ಲೀಮ್ ಮೂಲತಃ ಉತ್ತರಪ್ರದೇಶದ ಬರೇಲಿಯವರು.
UT Khadar : ಸ್ಪೀಕರ್ ಯು.ಟಿ.ಖಾದರ್ ಗೆ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿ