ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಯೋಜನೆ ಚೆನ್ನಾಗಿದೆ ಆದರೆ ಈ ಯೋಜನೆ ಕಾಮಗಾರಿ ಶುರು ಮಾಡಿದರೆ ಬೀಬಿ ಬದಿ ವ್ಯಾಪಾರಿಗಳು ಬೀದಿಗೆ ಬೀಳುವುದು ಖಂಡಿತ ಏಕೆಂದರೆ ಬೇರೆ ಕಡೆಯಿಂದ ಬಂದಂತಹ ಅದೆಷ್ಟೋ ಜನರು ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನವನ್ನು ನಡೆಸುತಿದ್ದಾರೆ.
ಬಿಬಿಎಂಪಿ ಸಮಿಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಖ್ಯೆ ಸುಮಾರು 1.50 ಲಕ್ಷ ವ್ಯಾಪಾರಿಗಳಿದ್ದಾರೆ ಅವರಲ್ಲಿ ಸುಮಾರು 25 ಸಾವಿರ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಪರವಾನಿಗೆ ನೀಡಿದೆ ಹಾಗೂ ಇನ್ನುಳಿದ 89 ಸಾವಿರ ಬೀದಿ ಬದಿ ವ್ಯಾಪಾರಿಗಳು ಪ್ರಧಾನಮಂತ್ರಿ ಸ್ವಾಯತ್ತು ಯೋಜನೆಯಡಿ ನೊಂದಣಿ ಮಾಡಿಕೊಂಡಿದ್ದಾರೆ. ಹಾಗಾಗಿ ಬಿಬಿಎಂಪಿ ಇಲಾಖೆಯಿಂದಲೇ ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ.
ಆದರೆ ಈ ಬ್ರಾಂಡ್ ಬೆಂಗಳೂರು ಯೋಜನೆಯಿಂದ ಎಲ್ಲಾ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಇಲಾಖೆ ತೆರವುಗೊಳಿಸಲು ತಿಳಿಸಿದ್ದಾರೆ ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇವರ ಈ ನಡೆಗೆ ಆಕ್ರೋಶಗೊಂಡ ವ್ಯಾಪಾರಿಗಳು ತಕ್ಷಣವೆ ಇದನ್ನು ನಿಲ್ಲಿಸಿ ನಮಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಇಲ್ಲದಿದ್ದರೆ ಬಿಬಿಎಂಪಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
Bulls- ಹತ್ತು ಗಂಟೆಯಲ್ಲಿ 18 ಎಕರೆ ಭೂಮಿಯನ್ನು ಉಳುಮೆ ಮಾಡಿದ ಜೋಡೆತ್ತುಗಳು