ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುವ ಕಾರಣ ರಾಜ್ಯದ ಮಹಿಳೆಯರೆಲ್ಲ ಖಾಸಗಿ ಬಸ್ ಗಳು ಆಟೊ ಟ್ಯಾಕ್ಸಿ ಇವೆಲ್ಲವನ್ನು ತೊರೆದು ಸರ್ಕಾರಿ ಬಸ್ ಗಳಲ್ಲಿ ಸಂಚರಿಸುತಿದ್ದಾರೆ. ಇದರಿಂದಾಗಿ ಖಾಸಗಿ ಸಾರಿಗೆ ವಾಹನಗಳಿಗೆ ಪ್ರಯಾಣಿಕರೇ ಇಲ್ಲದಂತಾಗಿದೆ.
ಆಟೋ ಚಾಲಕರು ದಿನ ಪೂರ್ತಿ ನಿಲ್ಧಾಣಗಳಲ್ಲಿ ಕುಳಿತರೂ ಒಂದು ಗಿರಾಕಿಗಳು ಬರದೆ ಇರುವುದರಿಂದ ಸಾಯಂಕಾಲ ಮನೆಗೆ ಹೋಗುವಾಗ ಖಾಲಿ ಜೇಬಿನಲ್ಲಿ ಹೋಗುವಂತಾಗಿದೆ ,ಮನೆ ಸಂಸಾರ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಸಾಲ ತೀರಿಸಲಾಗುತ್ತಿಲ್ಲ ಎಂದು ನೋವು ಪಡುತ್ತಿದ್ದಾರೆ.
ಇದರಿಂದ ಬೇಸತ್ತ ಖಾಸಗಿ ವಾಹನ ಮಾಲೀಕರು ಸರ್ಕಾರದ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ ಇದಕ್ಕೆ ಮುಂಚೆ ಉಚಿತ ಪ್ರಯಾಣಕ್ಕೆ ಖಾಸಗಿ ವಾಹನಗಳನ್ನೂ ಪರಿಗಣನೆಗೆ ತೆಗೆದುಕೊಳ್ಳುವಂತೆ ಪತ್ರ ಬರೆಯಲಾಗಿತ್ತು ಆದರೆ ಇದುವರೆಗೂ ಉತ್ತರ ಸಿಗದೆ ಇರುವುದು ಬೇಸರ ತಂದಿದೆ ಹಾಗಾಗಿ ಜುಲೈ 27 ರಂದು ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಬಂದ್ ಗೆ ಕರೆ ನೀಡಿದ್ದಾರೆ.
Grhalaxmi Yojana : ಗೃಹಲಕ್ಷ್ಮೀ ಯೋಜನೆಗೆ ನೋಂದಣಿಗಾಗಿ ಹೀಗೆ ಮಾಡಿ..?!
Sudharshan Moodabidire : ಸುದರ್ಶನ್ ಮೂಡುಬಿದಿರೆ ನೇತೃತ್ವದಲ್ಲಿ ಟಿಫಿನ್ ಬೈಠಕ್