ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಗಾಳಿ ಸಹಿತ ಮಳೆ ಶುರುವಾಗಿದ್ದು ಬಾರಿ ಮಳೆಗೆ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ ನಾಶವಾಗಿದೆ.ಇನ್ನು ಹಲವು ಕಡೆಗಳಲ್ಲಿ ವಿದ್ಯುತ್ ಕಂಬ ರಸ್ತೆಗೆ ಉರುಳಿ ಬಿದ್ದಿದ್ದು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇನ್ನು ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಕಲ್ಗಣ್ಣೆ ಗ್ರಾಮದಲ್ಲಿ ನಡೆದಿದ್ದು ಬಾರಿ ಪ್ರಮಾಣದ ಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಇದರಿಂದಾಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ವಿದ್ಯತ್ ಸಂಪರ್ಕ ಕಡಿತಗೊಂಡಿದೆ.
ಕಳೆದ ಎರಡು ದಿನಗಳಿಂದ ಸಕಲೇಶಪುರ ಭಾಗದಲ್ಲಿ ಬಿರುಸುಗೊಂಡಿರುವ ಮುಂಗಾರು ಮಳೆಯಿಂದ ಸಂತಸಗೊಂಡಿರುವ ರೈತರು ಉತ್ತಮ ಮಳೆಯಾದ ಕಾರಣ ರೈತರು ಹೊಲಗಳಲ್ಲಿ ಭತ್ತ ನಾಟಿ ಮಾಡುತಿದ್ದಾರೆ. ಇನ್ನು ಜಿಲ್ಲೆಯ ಹಲವುಕಡೆ ಮೊಡ ಕವಿದ ವಾತಾವರಣವಿದ್ದು ಜಿಲ್ಲೆಯ ಹಲವು ಕಡೆ ಜಿಟಿ ಜಿಟಿ ಮಳೆಯಾಗಿದೆ.
Bulls- ಹತ್ತು ಗಂಟೆಯಲ್ಲಿ 18 ಎಕರೆ ಭೂಮಿಯನ್ನು ಉಳುಮೆ ಮಾಡಿದ ಜೋಡೆತ್ತುಗಳು