Monday, December 23, 2024

Latest Posts

Holenarasipura:ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

- Advertisement -

ಹಾಸನ: ಜಿಲ್ಲೆಯ ಹೊಳೆನರಸೀಪುರದ ಠಾಣಾ ವ್ಯಾಪ್ತಿಯಲ್ಲಿ  ಇಂದು ಇಡಿ ಗ್ರಾಮವೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಪತ್ನಿಯ ಶೀಲವನ್ನು ಶಂಕಿಸಿದ ಪತಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಚಂದ್ರಮೌಳಿ ಎನ್ನುವ ಪತಿ  ಹೆಂಡತಿ ಅಂಬಿಕಾಳ ಶೀಲದ ಮೇಲೆ ಅನುಮಾನ ಪಟ್ಟು ಅವಳನ್ನು ಮನೆಗೆ ಕರೆಸಿಕೊಂಡು ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ

ಇನ್ನು ಈ ಅಂಬಿಕಾ ಹಾಸನ ಜಿಲ್ಲೆಯ ಆಲಗೌಡನಹಳ್ಳಿಯವಳು.  ಪತ್ನಿ ಅಂಬಿಕಾ ಹಾಸನದ ಜಾಕಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದಳು ಇದೇ ವಿಷಯವಾಗಿ ನಿನ್ನೆ ದಿನ ಹಳ್ಳಿ ಮೈಸೂರಿನಲ್ಲಿ  ರಾಜಿ ಸಂದಾನ ಮಾಡಿದ್ದರು . ಆದರೆ ಕುಪಿತಗೊಂಡ ಚಂದ್ರಮೌಳಿ ಕೆಲಸಕ್ಕೆ ಹೋದವಳನ್ನು ಕರೆಸಿಕೊಂಡು ಅರಣ್ಯಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

ಇನ್ನು ಈ ಕೊಲೆ ಪ್ರಕರಣ ಹೊಳೆನರಸೀಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು  ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Shakthi yojane-ಶಕ್ತಿ ಯೋಜನೆಯಿಂದ ಕಂಗಾಲಾದ ಖಾಸಗಿ ವಾಹನ ಮಾಲೀಕರು

Brand Bengalore: ಬ್ರ್ಯಾಂಡ್ ಬೆಂಗಳೂರು.! ವ್ಯಾಪಾರಿಗಳು ಬೀದಿ ಪಾಲು

Grhalaxmi yojana : ಗೃಹಲಕ್ಷ್ಮೀ ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್..! ಹಾಸನದಲ್ಲಿ ಸರ್ವರ್ ಡೌನ್..?!

- Advertisement -

Latest Posts

Don't Miss