Congress : ನಾಯಕತ್ವವಿಲ್ಲದ ಬಿಜೆಪಿಗೆ ಜೆಡಿಎಸ್ ನಿಂದ  ನಾಯಕನ ಎರವಲು….?! : ಕಾಂಗ್ರೆಸ್  ಟ್ವೀಟ್

Political News : ಕಾಂಗ್ರೆಸ್ ಹಾಗು  ಬಿಜೆಪಿ ಟ್ವಿಟ್ ಕದನ ಮತ್ತೆ ಶುರುವಾಗಿದೆ. ಇತ್ತ  ಸದನ  ಕಲಾಪ ಮುಕ್ತಾಯವಾಗುತ್ತಿದ್ದಂತೆ ಟ್ವಿಟ್ ಮೂಲಕವೇ ಕಾಂಗ್ರೆಸ್ ಬಿಜೆಪಿಗೆ ಕುಟುಕಿದೆ.

ಬಿಜೆಪಿ ನಾಯಕರ  ಅಮಾನತು ವಿಚಾರದಲ್ಲಿಯೂ  ಬಿಜೆಪಿ ಜೊತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೈಜೋಡಿಸಿರುವುದು ಗೊತ್ತಿರೋ ವಿಚಾರ. ಈ  ವಿಚಾರವಾಗಿಯೇ ಕಾಂಗ್ರೆಸ್ ಬಿಜೆಪಿ ಹಾಗು  ಜಡಿಎಸ್  ನ್ನು ಟ್ವಿಟ್ ಮೂಲಕವೇ ಕಾಲೆಳೆದಂತಿದೆ.

ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯು “ಕುರುಡನ ಹೆಗಲ ಮೇಲೆ ಕುಂಟನ ಸವಾರಿ”ಯಂತಿದೆ! ಒಬ್ಬರಿಗೆ ನಡೆಯಲಾಗದು, ಮತ್ತೊಬ್ಬರಿಗೆ ಕಣ್ಣು ಕಾಣದು. ಒಟ್ಟಿನಲ್ಲಿ ಈ ಸವಾರಿಯು ದಾರಿ ತಪ್ಪಿ ಪ್ರಪಾತಕ್ಕೆ ಬೀಳುವುದು ನಿಶ್ಚಿತ.ನಾಯಕತ್ವವಿಲ್ಲದ ಬಿಜೆಪಿ ಜೆಡಿಎಸ್ ನಿಂದ ನಾಯಕತ್ವದ ಎರವಲು ಪಡೆಯಲು ಮುಂದಾಗಿದ್ದು ನಾಚಿಕೆಗೇಡು. ಇತ್ತ ಜೆಡಿಎಸ್ ಕೋಮುವಾದಿಗಳ ಸಂಘ ಮಾಡಿದ್ದು ಮತಿಗೇಡಿತನ. ಎಂಬುವುದಾಗಿ ಟ್ವಿಟರ್ ನಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರ ಧರಣಿ ಬಗ್ಗೆ ಟಾಂಗ್ ನೀಡಿದೆ.

‘ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಥೇಟ್ ನಾಗವಲ್ಲಿಯ ತರ. ಕುರುಡನ ಹೆಗಲ ಮೇಲೆ ಕುಂಟನ ಸವಾರಿ’

‘ಲಮಾಣಿಯವರಿಗೆ ಸಚಿವ ಸ್ಥಾನ ಬಿಟ್ಟು ಕೊಡಲಿ, ದಲಿತರನ್ನೇ ಸಿಎಂ ಮಾಡಲಿ’

Siddaramaiah : ಬಿಜೆಪಿಗರ ಧರಣಿ ವಿರುದ್ಧ ಸದನದಲ್ಲಿ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

 

About The Author