Monday, May 12, 2025

Latest Posts

One Kiss story: ಹೆಂಡತಿಯ ಒಪ್ಪಿಗೆ ಇಲ್ಲದೆ ಕಿಸ್ ಕೊಟ್ಟನು.! ನಾಲಿಗೆ ಕಳೆದುಕೊಂಡನು..!

- Advertisement -

ಆಂದ್ರಪ್ರದೇಶ: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ ಚಿಕ್ಕ ವಿಷಯಕ್ಕೆ ಜಗಳಗಳಾಗುವುದು ಸಾಮಾನ್ಯವಾಗಿದೆ ಜನರ ಮುಂದೆ ಹೆಂಡತಿ ಬಿದ್ದಿದ್ದನ್ನು ನೋಡಿದ ಗಂಡ ಅವಳನ್ನ ನೋಡಿ ನಕ್ಕಿದ್ದಕ್ಕಾಗಿ ಹೆಂಡತಿ ಗಂಡನ ವಿರುದ್ದ ದೂರು ದಾಖಲಿಸಿದ್ದ ಘಟನೆ ಮತ್ತು ರಾತ್ರಿ ಮಲಗಿರುವ ಸಮಯದಲ್ಲಿ ಗಂಡ ಗೊರಕೆ ಹೊಡೆದನು ಎಂದು ಗಂಡನಿಗೆ ವಿಚ್ಛೇದನ ನೀಡಿದ ಹೆಂಡತಿ ಹೀಗೆ ಘಟನೆಗಳಿ ನಡೆಯುತ್ತವೆ ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ.

ಗಂಡ ಹೆಂಡತಿಯ ಅನುಮತಿ ಇಲ್ಲದೆ ಹೆಂಡತಿಗೆ ಮುತ್ತು ಕೊಟ್ಟ ಎನ್ನುವ ಕಾರಣಕ್ಕೆ ಹೆಂಡತಿ ಗಂಡನ ನಾಲಿಗೆಯನ್ನು ಕಚ್ಚಿದ ಘಟನೆ ನಡೆದಿದೆ. ಈ ಘಟನೆ ನಡೆದಿದ್ದು ಆಂದ್ರಪ್ರದೇಶ ಗುಂಟೂರಿನಲ್ಲಿ ನಡೆದಿದೆ. ಗುಂಟೂರು ಜಿಲ್ಲೆಯ ತಾರಾಚಂದ್  ನಾಯ್ಕ್ ಎನ್ನುವವರು ತಗ್ಗುಲಿ ಜಿಲ್ಲೆಯ ಪುಷ್ಪಾವತಿ ಎನ್ನುವವರನ್ನು 8 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪ್ರತಿದಿನ ಸರಸದಿಂದಲೇ ಶುರುವಾಗುತ್ತಿದ್ದ ಇವರ ದಿನಚರಿ ದಿನಕಳೆದಂತೆ ಸಂಸಾರದಲ್ಲಿ ಚಿಕ್ಕ ವಿಷಯಕ್ಕೆ ಜನಗಗಳಾಗೋಕೆ ಶುರುವಾಯಿತು

ಶುಕ್ರವಾರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಆಗ ಪತ್ನಿ ಪುಷ್ಪಾವತಿ  ತಾರಾಚಂದ್ ನ ನಾಲಿಗೆಯನ್ನು  ಕಚ್ಚಿದ್ದಾಳೆ ನೋವು ತಾಳಲಾದರೆ ಕಿರುಚಿದ್ದಾನೆ ನಂತರ ಅಕ್ಕಪಕ್ಕದ ಜನ ಅವರನ್ನು ಗುತ್ತಿ ಆಸ್ಪತ್ರಗೆ ಸೇರಿಸಿದ್ದಾರೆ ಹೆಚ್ಚಿನ ಚಿಕಿತ್ಸೆಗೆ  ಅನಂತಪುರ ಜಿಲ್ಲಾಸ್ಪತ್ರೆ ಗೆ ತೆರಳುವಂತೆ ಸೂಚಿಸಿದ್ದಾರೆ.

ಈ ಘಟನೆ ಬಗ್ಗೆ ಪತಿ ತಾರಾಚಂದ್ ನಾಯ್ಕ್ ಜೊನ್ನಗಿರಿ ಠಾಣೆಗೆ ದೂರನ್ನು ದಾಖಲಿಸಿದ್ದಾನೆ ಈ ಘಟನೆ ಬಗ್ಗೆ ಪೋಲಿಸರು ಪತ್ನಿಯನ್ನು ವಿಚಾರಿಸಿದಾಗ ತನ್ನ ಅನುಮತಿ ಇಲ್ಲದೆ ಕಿಸ್ ಕೊಡಲು ಮುಂದಾದರೂ ಎಂದು ಹೇಳಿದ್ದಾಳೆ.

- Advertisement -

Latest Posts

Don't Miss