Monday, December 23, 2024

Latest Posts

Udyoga mela: ಉದ್ಯೋಗ ಮೇಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ: ದೇಶದ ಪ್ರಗತಿಗೆ ಕೈ ಜೋಡಿಸಿ

- Advertisement -

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಬಿವ್ಹಿಬಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಇಂದು ದೇಶದಾದ್ಯಂತ 20 ಸಾವಿರ ಯುವಕ-ಯುವತಿಯರಿಗೆ ಉದ್ಯೋಗ ಒದಗಿಸುವ ಕೆಲಸ ನಡೆಯುತ್ತಿದೆ. ನಮ್ಮ ದೇಶ ಮುಂದಕ್ಕೆ ಹೋಗುತ್ತಿದೆ. ಆಹಾರ ಪದಾರ್ಥಗಳನ್ನು ಬೇರೆ ದೇಶಕ್ಕೆ ರಪ್ತು ‌ಮಾಡುವ ಹಂತಕ್ಕೆ ಬಂದಿದ್ದೇವೆ ಎಂದರು.

ರಸಗೊಬ್ಬರದಲ್ಲಿ ನಾವು ಸ್ವಾವಲಂಬಿ ಆಗಬೇಕು. ಸರ್ಕಾರ ಇರುತ್ತದೆ, ಸರ್ಕಾರ ಹೋಗುತ್ತದೆ, ಆದರೆ ಪ್ರಧಾನಿ ಮೋದಿಯವರ‌ ಸಂಕಲ್ಪ ದೇಶ ‌ಪ್ರಗತಿಯಾಗಬೇಕು. ಸಂಬಳಕ್ಕಾಗಿ ದುಡಿಯಬಾರದು, ಕರ್ಮಯೋಗಿಗಳಾಗಬೇಕು ಎಂದು ಅವರು ಸಲಹೆ ನೀಡಿದರು.

ನೀವು ಕೆಲಸ ಮಾಡಿ, ನಿಮ್ಮ‌ ಇಲಾಖೆಯನ್ನ ಮೇಲಕ್ಕೆ ಎತ್ತಿ, ದೇಶವನ್ನು ಮುನ್ನಡೆಸಿ ಎಂದು ಅವರು,ಇದೇ ವೇಳೆ ನೂತನವಾಗಿ ಕೆಲಸಕ್ಕೆ ಸೇರಿದ ಯುವಕರಿಗೆ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು.

Road widening: ಅಪಾಯಕಾರಿ ತಿರುವು ರಸ್ತೆಗೆ ಬೇಕಾಗಿದೆ ಮುಕ್ತಿ

Ramakrishna ashram: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ರಾಮಕೃಷ್ಣ ಆಶ್ರಮದ ಹಾಸ್ಟೆಲ್ ಗೆ ಎರೆಡು ಬಾಯ್ಲರ್ಗಳ ಕೊಡುಗೆ.

Gruhalaxmi: ಕನಕಪುರದ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಡಿಸಿಎಂ ದಿಢೀರ್ ಭೇಟಿ: ಗೃಹಲಕ್ಷಿ ನೋಂದಣಿ ಪ್ರಕ್ರಿಯೆ ಪರಿಶೀಲನೆ

- Advertisement -

Latest Posts

Don't Miss