Wednesday, January 22, 2025

Latest Posts

Ramakrishna ashram: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ರಾಮಕೃಷ್ಣ ಆಶ್ರಮದ ಹಾಸ್ಟೆಲ್ ಗೆ ಎರೆಡು ಬಾಯ್ಲರ್ಗಳ ಕೊಡುಗೆ.

- Advertisement -

ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,ಬೆಂಗಳೂರು,ಇದರ ಅಧ್ಯಕ್ಷ ಶ್ರೀ ನಂಜನ ಗೌಡ, ನಿರ್ದೇಶಕರುಗಳಾದ ಶ್ರೀ ಮಂಜುನಾಥ ಎಸ್.ಕೆ.,ಶ್ರೀಮತಿ. ಭಾರತಿ ಜಿ ಭಟ್ ಹಾಗೂ ಮೈಸೂರು ರಾಂತೀಯ ವ್ಯವಸ್ಥಾಪಕರಾದ ಶ್ರೀ ಶಿವಕುಮಾರ ಬಿರಾದಾರ್, ಇವರುಗಳು ನಿನ್ನೆ ದಿನಾಂಕ (ಜುಲೈ 21)ರಂದು ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಹಂಪನಕಟ್ಟೆ ಮತ್ತು ಮಂಗಳಾದೇವಿ ಶಾಖೆಗಳಿಗೆ ಭೇಟಿ ನೀಡಿದರು.

ರಾಮಕೃಷ್ಣ ಆಶ್ರಮದ ಹಾಸ್ಟೆಲ್ ಗೆ ಶ್ರೀಶಾ ಸೊಸೈಟಿಯ ವತಿಯಿಂದ ನೀಡಲಾದ ರೂ.125000/- [ಒಂದು ಲಕ್ಷ ಇಪ್ಪತೈದು ಸಾವಿರ] ಬೆಲೆಯ ಎರಡು ಬಿಸಿನೀರು ಬಾಯ್ಲರ್ ಗಳನ್ನು ರಾಜ್ಯ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ನಂಜನ ಗೌಡರವರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಮಹಾರಾಜ್ ರವರಿಗೆ ಹಸ್ತಾಂತರಿಸಿದರು. ಸ್ವಾಮೀಜಿಯವರು ಮಠದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಬಾಲಿಕಾಶ್ರಮದ ಬಾಲಕರಿಂದ ವೇದಘೋಷ ನಡೆಯಿತು. ಸ್ವಾಮೀಜಿಯವರು ಮಾತನಾಡುತ್ತಾ, “ಶ್ರೀಶಾ ಸೊಸೈಟಿಯ ಈ ಕೊಡುಗೆಯು ಆಶ್ರಮದ ಮಕ್ಕಳಿಗೆ ಬಿಸಿನೀರಿನ ಆವಶ್ಯಕತೆಯನ್ನು ಪೂರೈಸುತ್ತದೆ.ಶ್ರೀಶಾ ಸೊಸೈಟಿಯು ರಾಮಕೃಷ್ಣ ಮಠಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದೆ” ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರು, ನಿರ್ದೇಶಕರೂ ಶ್ರೀಶಾ ಸೊಸೈಟಿಯ ಕಾರ್ಯವೈಖರಿ ಹಾಗೂ ಸಮಾಜ ಸೇವಾ ಕಾರ್ಯಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸೊಸೈಟಿಯು ನಿಜ ಅರ್ಥದಲ್ಲಿ ಮಾದರಿಯಾಗಿದೆ ಎಂದು ಪ್ರಶಂಶಿಸಿದರು.

ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್, ಉಪಾಧ್ಯಕ್ಷ ಉದಯ ವಿ ಶಾಸ್ತ್ರೀ,ನಿರ್ದೇಶಕರಾದ ಕೇಶವ ಭಟ್,ಪ್ರಸನ್ನ ರಾವ್ ಹಾಗೂ ಶ್ರೀಶಾ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ. ಚಿತ್ರಾ ಡಿ ಸೋಜ ಹಾಗೂ ಎಲ್ಲಾ ಶಾಖೆಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.

Rain news: ರಾಜ್ಯದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ..! ಎಲ್ಲೆಲ್ಲಿ?

Marriage : ಗರ್ಭವತಿಯಾಗಿಸಿ ಯಾಮಾರಿಸಲು ಯತ್ನ: ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ …!

Nandalike Road : ನಂದಳಿಕೆ ಕೊಪ್ಪಳ ರಸ್ತೆ ಕಾಮಗಾರಿ ಸ್ಥಗಿತ: ಓಡಾಟಕ್ಕೆ ಜನರ ಪರದಾಟ

- Advertisement -

Latest Posts

Don't Miss