Shakthi yojne: ಬೆಂಗಳೂರು ಬಂದ್ ಗೆ ಕರೆ ನೀಡಿದ್ದ ಸಾರಿಗೆ ನೌಕರರು ಕರೆ ವಾಪಸ್

ಬೆಂಗಳೂರು: ಶಕ್ತಿ ಯೇಜನೆಯಿಂದ ಕೆಂಗೆಟ್ಟಿರುವ ಖಾಸಗಿ ವಾಹನ ಚಾಲಕರು ಗ್ರಾಹಕರಿಗಾಗಿ ಪರದಾಡುವಂತಾಗಿದೆ. ದಿನ ಪೂರ್ತಿ ದುಡಿದರೂ ಮನೆಗೆ ಮನೆಗೆ ರೇಶನ್ ಗೆ ಸರಿಹೋಗುತ್ತಿಲ್ಲ ಹಾಗಾಗಿ ಶಕ್ತಿ ಯೋಜನೆ ಹೊರಡಿಸಿರುವ  ಆಡಳಿತ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಮಾಡಲಿದ್ದೇವೆ. ಬೆಂಗಳೂರು ಬಂದ್ ಗೆ ಕರೆನೀಡಿದ್ದರು ಆದರೆ  ಜುಲೈ 27 ರಂದು ಆಗಬೇಕಿದ್ದ ಬೆಂಗಳೂರು ಬಂದ್ ಕರೆಯನ್ನು ನಿಲ್ಲಿಸಲಾಗಿದೆ.  ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಶಕ್ತಿ ಯೋಜನೆ ಪರಿಣಾಮವಾಗಿ ಜುಲೈ 27ರಂದು ಬೆಂಗಳೂರು ಬಂದ್ ಕರೆ ನೀಡಿದ್ದ ವಿವಿಧ ಸಾರಿಗೆ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ
ಸಿಎಂ ಜೊತೆಯೂ ಮಾತಾಡಿಸಲಿದ್ದೇನೆ. ಬರುವ ಸೋಮವಾರ ಆಟೋ, ಕ್ಯಾಬ್, ಖಾಸಗಿ ಬಸ್ ಮುಖಂಡರ ಜೊತೆ ಸಭೆ ನಡೆಸಲಿದ್ದೇನೆ. ಅಧಿಕಾರಿಗಳ‌ ಜೊತೆಗೆ ಮಾತಾಡಿ ಸೂಚನೆ ನೀಡಿದ್ದೇನೆ ಎಂದು 35 ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ್ದೇನೆ ಸಾರಿಗೆ ಸಚಿವ ರಾಮಲಿಂಗ‌ ರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಖಾಸಗಿ ಬಸ್ ಸಂಘಟನೆ ಅಧ್ಯಕ್ಷ ನಟರಾಜ್ ಶರ್ಮ, “ನಮ್ಮ ಪ್ರಮುಖ ಬೇಡಿಕೆ ಈಡೇರಿಕೆಗೆ ಸಚಿವರು ಭರವಸೆ ನೀಡಿದ್ದಾರೆ. 28 ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆಗಸ್ಟ್ 10ರವರೆಗೆ ಸಚಿವರು ಸಮಯ ಕೇಳಿದ್ದಾರೆ. ಹೀಗಾಗಿ ಜುಲೈ 27ರಂದು ಬೆಂಗಳೂರು ಬಂದ್ ಇರಲ್ಲ” ಎಂದು ತಿಳಿಸಿದ್ದಾರೆಹೀಗಾಗಿ ಜುಲೈ 27 ರಂದು ಬೆಂಗಳೂರಿನಲ್ಲಿ ಆಟೋ, ಕ್ಯಾಬ್, ಓಲಾ, ಊಬರ್, ಖಾಸಗಿ ಬಸ್ ಬಂದ್ ಆಗುವುದಿಲ್ಲ ಎಂದು ಖಚಿತಪಟ್ಟಿದೆ.

Degree Exam : ದಕ್ಷಿಣ ಕನ್ನಡದಾದ್ಯಂತ ಮಳೆ ಹಿನ್ನೆಲೆ ಪದವಿ ಪರೀಕ್ಷೆ ಮುಂದೂಡಿಕೆ

Orange Alert : ಸುಳ್ಯ ತಾಲೂಕಿನಲ್ಲಿ ಆರೆಂಜ್ ಅಲರ್ಟ್​ ಘೋಷಣೆ

Bridge : ನಿರ್ಮಾಣಗೊಂಡು ವರ್ಷಕ್ಕೂ ಮೊದಲೇ ಕೊಚ್ಚಿಹೋದ ಕಿರು ಸೇತುವೆ…!

About The Author