ದುಶ್ಮನ್ ಕಹಾ ಹೈ ಅಂದರೆ ಬಗಲ್ ಮೇ ಅಂತಾರಲ್ಲಾ ಹಾಗಾಗಿದೆ ಈಗ ಆಡಳಿತ ಸರ್ಕಾರದ ಪರೀಸ್ಥಿತಿ ಯಾಕೆಂದರೆ ಆಡಳಿತ ಎರಡು ತಿಂಗಳ ಹಿಂದೆ ರಚನೆಯಾಗಿರುವ ಆಡಳಿತ ಸರ್ಕಾರವನ್ನು ಉರುಳಿಸಲು ಪಕ್ಷದ ನಾಯ ಕರೆ ಸಂಚು ಹೂಡುತ್ತಿದ್ದಾರೆ
ಹಿಂದೂ ಕಾರ್ಯಕರ್ತರ, ಜೈನ ಮುನಿಗಳ ಹತ್ಯೆ, ಪೊಲೀಸರ ಮೇಲೆ ಹಲ್ಲೆ, ಸಾಲು ಸಾಲು ಅತ್ಯಾಚಾರ ಹೀಗೆ ತಾನು ಆಡಳಿತವನ್ನು ನಿಭಾಯಿಸಲು ಅಸಮರ್ಥ ಎಂಬುದನ್ನು ಶುರುವಾತಿನಲ್ಲಿಯೇ ನಿರೂಪಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.
ಹೀಗಾಗಿ ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಸರ್ಕಾರಕ್ಕೆ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಬಡ, ಮಧ್ಯಮ, ಶ್ರಮಿಕ ವರ್ಗದವರು ಹೋದಲ್ಲಿ ಬಂದಲ್ಲಿ ಸರ್ಕಾರವನ್ನು ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ತಮ್ಮ ಭವಿಷ್ಯ ಮಂಕಾಗಲಿದೆ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಈಗ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.ಅಷ್ಟಕ್ಕೂ ಈ ಸರ್ಕಾರವನ್ನು ಉರುಳಿ ಬೀಳಿಸಲು ಹೊರಗಿನವರ ಅವಶ್ಯಕತೆ ಇಲ್ಲ, ಸಚಿವರಾದ ಎಂಬಿ ಪಾಟೀಲ್ ಸತೀಶ್ ಜಾರಕಿಹೊಳೆ, ಜಮೀರ್ ಅಹ್ಮದ್ ಖಾನ್ ಒಮ್ಮೆ ಗಟ್ಟಿಯಾಗಿ ಸಿದ್ದರಾಮಯ್ಯನವರೇ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳಿದರೆ ಡಿಕೆಶಿ ಬೆಂಬಲಿಗರು ಸುಮ್ಮನೆ ಕೂರುವ ಪ್ರಮೇಯವೇ ಬರುವುದಿಲ್ಲ ತಡ ಮಾಡದೆ ಮುಗಿಬೀಳುತ್ತೆ.
DK Shivakumar : ವಿದೇಶದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸಲಾಗುತ್ತಿದೆ: ಡಿಕೆಶಿ
ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ
2024 ಡಿಕೆಶಿಗೆ ಲಕ್ಕಿನಾ..? ಸಿಎಂ ಆಗೇ ಆಗ್ತಾರಾ ಡಿ.ಕೆ.ಶಿವಕುಮಾರ್..?