Film News : ನಾಗಿಣಿ ಮತ್ತು ಹದ್ದು ಹೇಳೋದಕ್ಕೆ ಬದ್ಧ ವೈರಿಗಳು ಆದರೆ ಇದೇ ವೈರಿಗಳು ದುಬೈನಲ್ಲಿ ಒಂದಾಗಿದ್ದಾರೆ. ನಾಗಲೋಕದ ಸುಂದರಿ ಮರಳುಗಾಡಿನಲ್ಲಿ ಹದ್ದಿನ ಜೊತೆ ಜಾಲಿ ಮೂಡ್ ನಲ್ಲಿಕಾಣಿಸಿಕೊಂಡಿದ್ದಾರೆ. ಗರುಡನಿಗೆ ನಾಗಿಣಿ ಚುಂಬಿಸಿ ಪ್ರೀತಿ ತೋರಿಸಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ ಈ ಸ್ಟೋರಿ ನೋಡಿ…….
ಅವರು ಕಿರುತೆರೆಯಲ್ಲೆ ಹೆಸರು ಗಳಿಸಿ ಬಿಗ್ ಬಾಸ್ ಸೀಸನ್ 7 ಮತ್ತು 9ರಲ್ಲಿ ಮಿಂಚಿದ ಚೆಲುವೆ. ಸದ್ಯ ದುಬೈಯಲ್ಲಿ ಮೋಜು ಮಸ್ತಿಯಲ್ಲಿ ಮತ್ತು ನಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಹೌದು ನಟಿ ದೀಪಿಕಾ ದಾಸ್ ಸದ್ಯ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟೈಲಿಶ್ ಲುಕ್‌ಗಳಲ್ಲೂ ಕಾಣಿಸಿಕೊಳ್ಳುವ ದೀಪಿಕಾ ದಾಸ್ ಅವರನ್ನು ಎಲ್ಲರೂ ನಾಗಿಣಿ ಎಂದೇ ಗುರುತಿಸುವುದು ಸಹಜ.
ದೀಪಿಕಾ ದಾಸ್ ಅವರು ‘ನಾಗಿಣಿ’ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಿದ್ದರು. ಆ ಧಾರಾವಾಹಿಯ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಇದರಿಂದಲೇ ಈಗಲೂ ಅವರನ್ನು ನಾಗಿಣಿ ಎಂದೇ ಗುರುತಿಸುತ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಭಾಗಿಯಾಗಿದ್ದ ದೀಪಿಕಾ ದಾಸ್, ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದರು. ಜೊತೆಗೆ ರಿಯಾಲಿಟಿ ಶೋಗಳಲ್ಲಿ ದೀಪಿಕಾ ದಾಸ್ ಭಾಗವಹಿಸಿದ್ದಾರೆ. ಇನ್ನು ‘ಸೂಪರ್ ಟಾಕ್ ಟೈಮ್’ ಎಂಬ ಕಾರ್ಯಕ್ರಮದಲ್ಲೂ ದೀಪಿಕಾ ದಾಸ್ ಅವರು ಕಾಣಿಸಿಕೊಂಡಿದ್ದರು. 2014ರಲ್ಲಿ ತೆರೆಕಂಡ ಸ್ಯಾಮುವೆಲ್ ಟೋನಿ ನಿರ್ದೇಶನದ ‘ದೂದ್ ಸಾಗರ್’ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತೆಲುಗಿನ ‘ಈ ಮನಸೇ’ ಚಿತ್ರದಲ್ಲಿ ನಟಿಸಿ, 2017 ರಲ್ಲಿ ತೆರೆಕಂಡ ‘ಡ್ರೀಮ್ ಗರ್ಲ್’ ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದರು. 2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ‘ನಾಗಿಣಿ’ ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು. ಈ ಧಾರಾವಾಹಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿ ದೀಪಿಕಾರವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತು.
ದೀಪಿಕಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಮನಗೆಲ್ಲುತ್ತಾರೆ. ದೀಪಿಕಾಗೆ ಪ್ರವಾಸಕ್ಕೆ ಹೋಗುವುದು ಎಂದರೆ ಬಹಳ ಇಷ್ಟವಂತೆ. ಸದ್ಯ ದುಬೈನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.ದುಬೈನ ಹೂದೋಟದಲ್ಲಿ ಕಂಗೊಳಿಸಿದ್ದಾರೆ. ದುಬೈ ಮಿರಾಕಲ್ ಗಾರ್ಡನ್‌ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದಾ ಸೋಲೋ ಟ್ರಿಪ್ ಎಂಜಾಯ್ ಮಾಡುವ ದೀಪಿಕಾ ದುಬೈ ಮರುಭೂಮಿಯಲ್ಲಿ ಸಫಾರಿಯನ್ನೂ ಮಾಡಿದ್ದಾರೆ. ಜೀಪ್ ಓಡಿಸಿ ಖುಷಿ ಪಟ್ಟಿರುವ ಚೆಲುವೆ ಗರುಡ ಪಕ್ಷಿಗೆ ಮುತ್ತಿಟ್ಟಿದ್ದಾರೆ. ಇದರ ವೀಡಿಯೋ ಕೂಡ ಅಪ್ ಲೋಡ್ ಮಾಡಿದ್ದಾರೆ.
ನಾಗಲೋಕದ ಸುಂದರಿ ಮರಳುಗಾಡಿನಲ್ಲಿ ಹದ್ದಿನೊಂದಿಗೆ ಇರುವ ಫೋಟೋವನ್ನು ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅಭಿಮಾನಿಗಳು ಹದ್ದಿನಿಂದ ನಾಗಿಣಿ ದೂರ ಇರಬೇಕು ಎಂಬುವುದಾಗಿ ಕಾಳಜಿಯಿಂದ ಕಮೆಂಟ್ ಮಾಡಿದ್ದಾರೆ. ಸದ್ಯ ದೀಪಿಕಾ ದಾಸ್ ಸೋಲೊ ಟ್ರಿಪ್ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗ್ತಿದೆ.
Dharshan : ದಚ್ಚು ಕಿಚ್ಚನ ಸ್ನೇಹ ಎಂತಹದ್ದು ಗೊತ್ತಾ..?! ಮತ್ತೆ ವೀಡಿಯೋ ವೈರಲ್..!
Amrtha Ayyangar : ಮದುವೆಯಾಗ್ತಾರಾ ಡಾಲಿ-ಅಮೃತಾ..?! ನಟಿ ಸ್ಪಷ್ಟನೆ ಏನು ..!