Banglore News : ಕಾರ್ಗಿಲ್ ವಿಜಯ್ ದಿವಸ್ ಜುಲೈ 26 ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನವದು. ಕಾರ್ಗಿಲ್ ಯುದ್ಧ ಅನ್ನೋದು ಭಾರತೀಯನ ಮನಸ್ಸಿನಲ್ಲಿ ಅಚ್ಚಲಿಯದೇ ಉಳಿದಿರೋ ಒಂದು ದಿವಸವದು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ಥಾನಿಗರನ್ನು ಭಾರತೀಯರು ಸದೆಬಡಿದು ಜಾಗವನ್ನು ವಶಪಡಿಸಿಕೊಂಡ ದಿನವದು.
ಈ ಪವಿತ್ರ ದಿನ ಕಾರ್ಗಿಲ್ ವಿಜಯ ದಿವಸವನ್ನು ಬೆಂಗಳೂರಿನ ವಿಜಯನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಗೋವಿಂದರಾಜನಗರದಿಂಧ ವಿಜಯನಗರ ವರಗೂ ಮ್ಯಾರಾಥಾನ್ ಮೂಲಕ 1000 ಮೀಟರ್ ರಾಷ್ಟ್ರಧ್ವಜದ ಫ್ಲ್ಯಾಗ್ ಮಾರ್ಚ್ ಮೆರವಣಿಗೆ ನಡೆಯಿತು.
ಸಾರ್ವಜನಿಕರು, ನಿವೃತ್ತ ಯೋಧರು, ಮಕ್ಕಳಿಂದ ಬೃಹತ್ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ವತಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಗೋವಿಂದರಾಜ ನಗರ ಕ್ಷೇತ್ರದ ಎಂಎಲ್ಎ ಪ್ರಿಯ ಕೃಷ್ಣ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು NCC ಅಭ್ಯರ್ಥಿಗಳು ಮತ್ತು. ಅನೇಕ ಕಲಾತಂಡಗಳು ಭಾಗಿಯಾಗಿದ್ದರು.
ತೆರೆದ ವಾಹನದಲ್ಲಿ ಶಾಸಕ ಪ್ರಿಯಾಕೃಷ್ಣ ಮೆರವಣಿಗೆಯಲ್ಲಿ ಪಾಲ್ಗೊಂಡರು. ಜೊತೆಗೆ ಬಡಗು ತಿಟ್ಟು ಯಕ್ಷಗಾನ ವೇಷಧಾರಿಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
KSPCB: ಸರ್ಕಾರದ ಅನುಮತಿ ಪಡೆಯದೆ ಕಾರ್ಯದರ್ಶಿಗಳ ನೇಮಕ..! ನೋಟಿಸ್ ಜಾರಿ
Hospital: ಶಕ್ತಿಯೋಜನೆಯಿಂದ ಬೆಂಗಳೂರಿನ ಆಸ್ಪತ್ರೆಗಳು ಭರ್ತಿಯಾಗಿವೆ..! ಹೇಗೆ ಅಂತೀರಾ?
Soldiers: ಕೋಲಾರದಲ್ಲಿ ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

