Friday, September 20, 2024

Latest Posts

Drumstick : ನುಗ್ಗೆಕಾಯಿ ಬೀಜ ಆಹಾರ ಮಾತ್ರವಲ್ಲ ಔಷಧ ಕೂಡ…!

- Advertisement -

Health Tips: ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ನುಗ್ಗೆ ಕಾಯಿ ಜೊತೆಗೆ ನುಗ್ಗೆ ಕಾಯಿ ಬೀಜದ ಪ್ರಯೋಜನ ಕೇಳಿದ್ರೆ ಖಂಡಿತ ಅಚ್ಚರಿ ಎನಿಸಬಹುದು…ಹಾಗಿದ್ರೆ ಆ ಆರೋಗ್ಯಕರ ಪ್ರಯೋಜನಗಳು ಏನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್….

ನುಗ್ಗೆಕಾಯಿ ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಮನೆ ಹಿತ್ತಿಲಿನಲ್ಲೇ ಸಿಗುವಂತಹ ಔಷಧೀಯ ಗುಣವಿರುವ ಗಿಡ. ನುಗ್ಗೆ ಕಾಯಿ ಬಗ್ಗೆ ಅಸಡ್ಡೆ ತೋರೋರು ಕೂಡ ಈ ವಿಚಾರ ಕೇಳಿದ್ರೆ ಇಂದೇ ನುಗ್ಗೆಕಾಯಿ ತಿನ್ನೋದಂತು ಗ್ಯಾರಂಟಿ.

ಹೌದು ನುಗ್ಗೆ ಕಾಯಿ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಗತ್ಯವಾದ ಅಮೈನೋ ಆಮ್ಲಗಳನ್ನು ಕೂಡಾ ತನ್ನಲ್ಲಿ ಇರಿಸಿಕೊಂಡಿದೆ.

 ಉತ್ತಮ ನಿದ್ದೆಗೆ ನುಗ್ಗೆಕಾಯಿ ಬೀಜ ಸಹಕಾರಿ : ಬಿಸಿನೀರಿನಲ್ಲಿ 15 ನಿಮಿಷಗಳ ಕಾಲ ನುಗ್ಗೆಕಾಯಿ ಬೀಜಗಳನ್ನು ನೆನೆಸಿ. ಮಲಗುವ ಮೊದಲು ಆ ನೀರನ್ನು ಕುಡಿಯುವುದರಿಂದ ಉತ್ತಮ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಮದುಮೇಹಿಗಳಿಗೂ ರಾಮಬಾಣ:ನುಗ್ಗೆಕಾಯಿಯ ಬೀಜಗಳಲ್ಲಿ ಸಾಕಷ್ಟು ಪ್ರಮಾಣದ ಸತುವಿನ ಅಂಶವಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ನುಗ್ಗೆ ಬೀಜಗಳನ್ನು ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಬಳಕೆ ಮಾಡುತ್ತಿದ್ದರೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು ಎಂದು  ಕೂಡ ಹೇಳಲಾಗಿದೆ. ಅಧಿಕ ರಕ್ತದೊತ್ತಡಕ್ಕೂ ಕೂಡ ಉತ್ತಮ ಮದ್ದಾಗಿದೆ.

ಕೀಲುನೋವಿನ ಶಮನ:ಸಂಧಿವಾತ, ಕೀಲುನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಆರೈಕೆ ಅಗತ್ಯವಾಗಿರುತ್ತದೆ. ಅದಕ್ಕೆ ನುಗ್ಗೆ ಬೀಜಗಳು ಅತ್ಯುತ್ತಮ ಮನೆಮದ್ದು ಕೂಡಾ ಹೌದು. ನುಗ್ಗೆ ಬೀಜಗಳು ಕ್ಯಾಲ್ಸಿಯಂನ್ನು ಪೂರೈಕೆ ಮಾಡುವ ಮೂಲಕ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ.

ಹೃದಯ ಸಂಬಂಧಿ ರೋಗಗಳ ನಿವಾರಣೆ : ನುಗ್ಗೆ ಬೀಜ ದೇಹದಲ್ಲಿನ ಆಕ್ಸಿಡೀಕೃತ ಲಿಪಿಡ್‌ಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ. ಜೊತೆಗೆ ರಚನಾತ್ಮಕ ಹಾನಿಯಿಂದ ಹೃದಯ ಅಂಗಾಂಶವನ್ನು ರಕ್ಷಿಸುತ್ತದೆ. ವಿಜ್ಞಾನಿಗಳು ಇದನ್ನು ಸಾಬೀತುಪಡಿಸಿದ್ದಾರೆ ಕೂಡಾ.

ಕೆಲವು ಸಸ್ಯಗಳು ದೇಹವು ಕೆಟ್ಟ ಕೊಬ್ಬನ್ನು ಚಯಾಪಚಯಗೊಳಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಅದರಲ್ಲಿ ನುಗ್ಗೆ ಸಸ್ಯ ಕೂಡ ಒಂದು.

ಚರ್ಮದ ಆರೈಕೆ:ಚರ್ಮದ ಆರೈಕೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಈ ಬೀಜದ ಎಣ್ಣೆಯನ್ನು ಚರ್ಮದ ಮಾಯಿಶ್ಚರೈಸರ್ ಆಗಿ ಬಳಸಬಹುದು. ಇದನ್ನು ತ್ವಚೆಯ ಆರೈಕೆಯಲ್ಲಿ ಫೇಸ್ ಪ್ಯಾಕ್ ಆಗಿಯೂ ಬಳಸಬಹುದು. ಚರ್ಮದ ದದ್ದುಗಳ ನಿವಾರಣೆಗೆ ಕೂಡ ಸಹಾಯ ಮಾಡುತ್ತದೆ.

ಈ ಬೀಜಗಳನ್ನು ತುಪ್ಪದಲ್ಲಿ ಹುರಿದು  ಸೇವನೆ ಮಾಡಬಹುದು. ಆದರೆ ಅತಿಯಾಗಿ ಸೇವನೆ ಒಳ್ಳೆಯದಲ್ಲ.

ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?

 

ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

ಮಕ್ಕಳಿಗೆ ಎಕ್ಸ್ಪೈರ್ ಆದ ಡೈಪರ್ ಬಳಸುವ ಮುನ್ನ ಈ ಸ್ಟೋರಿ ಓದಿ..

 

 

 

 

 

 

- Advertisement -

Latest Posts

Don't Miss