ತುಮಕೂರು: ಜಿಲ್ಲೆಯ ಕುಣಿಗಲ್ ಶಾಸಕ ರಂಗನಾಥ ಅವರಕ್ಷೇತ್ರದ ಜನರ ಪಾಲಿಗೆ ತಂದೆಯ ಸಮಾನರಾಗಿದ್ದಾರೆ ಯಾಕೆಂದರೆ ಅವರ ಹತ್ತಿರ ಯಾರೆ ಸಹಾಯ ಕೇಳಿ ಬಂದರೂ ಅವರು ಬರಿ ಕೈಯಲ್ಲಿ ಕಳಿಸುವುದಿಲ್ಲ ವೃತ್ತಿಯಲ್ಲಿ ವೈಧ್ಯರಾಗಿರುವ ಡಾ ರಂಗನಾಥ ಅವರು ಆಸ್ಪತ್ರೆಯಲ್ಲಿ ಯಾರಾದರೂ ಬಡವರು ಬಂದರೆ ಅವರಿಗ ಎಚಿಕಿತ್ಸೆಗೆ ಹಣವಿಲ್ಲದಿದ್ದರೆ ಉಚಿತ ಚಿಕಿತ್ಸೆ ನೀಡಿ ಕಳುಹಿಸುತ್ತಾರೆ
ಕಳೆದ ಜೂನ್ 27 ರಂದು ಒಬ್ಬ ಬಡ ಮಹಿಳೆಗೆ ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದಿದ್ದರಿಂದ ಉಚಿತವಾಗಿ ಆಪರೇಷನ್ ಮಾಡಿ ಕಳುಹಿಸಿದ್ದರು ಈಗ ಮತ್ತೊಮ್ಮೆ ಉಚಿತವಾಗಿ ಆಪರೇಷನ್ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಅವರು ಮಂಡಿ ನೋವಿನಿಂದ ಬಳಲುತ್ತಿದ್ದರು ಚಿಕಿತ್ಸೆಗೆ ಹಣವಿಲ್ಲದೆ ಶಾಸಕರ ಹತ್ತಿರ ಬಂದಾಗ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಜನರಿಂದ ಬೇಷ್ ಎನಿಸಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹಮಂತ್ರಿಗಳಾದ ಡಾ ಜಿ ಪರಮೇಶ್ವರ ಅವರು ಕೆಪಿಡಿ ಸಭೆ ಯಲ್ಲಿ ಶ್ಲಾಘಿಸಿದರು.
ಜೂನ್ 27 ರಂದು ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎನ್ನುವ ಮಹಿಳೆ ಕೀಲು ನೋವಿನಿಂದ ಬಳಲುತ್ತಿದ್ದರು ಹೀಗಾಗಿ ಡಾ. ರಂಗನಾಥ್ ಅವರ ಹತ್ತಿರ ಮನವಿ ಮಾಡಿಕೊಂಡಾಗ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿ ಮಅನವಿಯತೆ ಮೆರೆದಿದ್ದರು. ಇವರು ಮೂಲತಃ ಆರ್ಥೋ ಪೆಡಿಕ್ ವೈದ್ಯರಾಗಿರುವ ಡಾ ರಂಗನಾಥ ರೋಗಿಗಳ ಪಾಲಿನ ತಂದೆಯಾಗಿದ್ದಾರೆ.
School holiday: ರಾಯಚೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
Biriyani: ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕಚೇರಿ ಉದ್ಘಾಟನೆಯಲ್ಲಿ ಬಾಡೂಟ