ಮಂಡ್ಯ : ಇಡೀ ವಿಶ್ವವೇ ಮಾರಕ ವೈರಸ್ ಕೊರೊನಾಗೆ ತತ್ತರಿಸಿದೆ.. ಇಂಡಿಯಾ, ಮಂಡ್ಯ ಇದರಿಂದ ಹೊರತಾಗಿಲ್ಲ. ಇನ್ನು ಲಾಕ್ ಡೌನ್ ಹಿನ್ನೆಲೆ ಜನ ಅಗತ್ಯ ವಸ್ತು ಖರೀದಿಗೆ ಮಾತ್ರ ಮನೆಯಿಂದ ಹೊರ ಬರ್ತಿದ್ದಾರೆ.. ಮಂಡ್ಯದಲ್ಲಿ ಮಾರುಕಟ್ಟೆ ಕ್ಲೋಸ್ ಮಾಡಿ ಸ್ಟೇಡಿಯಂ ಅನ್ನೇತಾತ್ಕಾಲಿಕ ಮಾರುಕಟ್ಟೆ ಮಾಡಲಾಗಿದೆ.. ಜನರು ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮಂಡ್ಯ ಜಿಲ್ಲಾಡಳಿತ ಈ ರೀತಿ ಮಾಡಿದೆ..
ಟನಲ್ ನಲ್ಲಿ ಹಾದು ಹೋದ್ರೆ ಏನಾಗುತ್ತೆ..?
ಇನ್ನು ಮಂಡ್ಯ ಸ್ಟೇಡಿಯಂ ಬಾಗಿಲಲ್ಲಿ ಸೋಂಕು ನಿವಾಋಕ ಸಿಂಪಡಣೆ ಟನಲ್ ಸ್ಥಾಪಿಸಿದ್ದಾರೆ.. ತರಕಾರಿ ಖರೀದಿಗೆ ಬರುವ ಜನ ಈ ಟನಲ್ ಒಳಗಿನ ಮೂಲಕ ಸ್ಟೇಡಿಯಂ ಪ್ರವೇಶ ಮಾಡ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿ ತಾತ್ಕಾಲಿಕ ಟನಲ್ ನಿರ್ಮಾಣ ಮಾಡಲಾಗಿದ್ದು ಜನ ಉಪಯೋಗ ಮಾಡಿಕೊಳ್ತಿದ್ದಾರೆ.
ಟನಲ್ ನಲ್ಲಿ ಹಾದು ಹೋದ್ರೆ ಉಪಯೋಗವೇನು..?
ಟನಲ್ ನಲ್ಲಿ ಔಷಧಿ ಸಿಂಪಡಿಸುವಾಗ ಹಾದು ಹೋದರೆ ಮೈಮೇಲೆ ವೈರಸ್ ಇದ್ದರೆ, ಬಟ್ಟೆಯಲ್ಲಿ ಸೇರಿಕೊಂಡಿದ್ರೆ ಸಾಯುತ್ತೆ.. ಆದ್ರೆ, ಈಗಾಗಲೇ ದೇಹದ ಒಳಗೆ ಕೊರೊನಾ ವೈರಸ್ ಹೊಕ್ಕಿದ್ರೆ ಏನೂ ಪ್ರಯೋಜನವಿಲ್ಲ. ಈ ರೀತಿ ಔಷಧಿ ಸಿಂಪಡಣೆ ಕೆಲವರಿಗೆ ಅಲರ್ಜಿಯನ್ನೂ ತರಬಹುದು, ಇತರೆ ಸಮಸ್ಯೆಗೆ ಕಾರಣವಾಗಬಹುದು ಅಂತಾರೆ ಮಾನಸಿಕ ಹಾಗೂ ನರರೋಗ ತಜ್ಞರಾದ ಡಾ ಅನಿಲ್ ಆನಂದ್ ಅವರು..
ಒಟ್ಟಾರೆ ಪ್ರಪಂಚದಲ್ಲಿ ಕೊರೊನಾ ಗುಣಪಡಿಸಿವ ಔಷಧಿ ಸಿಕ್ಕಲ್ಲ. ಆದ್ರೆ, ಅದರಿಂದ ಬಚಾವಾಗಲು ನಾನಾ ದಾರಿಗಳಿದೆ.. ಈಗಾಗಿ ಸಾಧ್ಯವಾದಷ್ಟು ಸಾಮಾಜಿಕ ಕಾಯ್ದುಕೊಂಡು ಕೊರೊನಾದಿಂದ ಜನರು ಬಚಾವಾಗಗಬೇಕಿದೆ.
ಪ್ರವೀಣ್ ಕುಮಾರ್ ಜಿ.ಟಿ ಮಂಡ್ಯ, ಕರ್ನಾಟಕ ಟಿವಿ