Film News : 2017 ರಲ್ಲಿ ತೆರೆ ಮೇಲೆ ಒಂದಾಗಿ ಮೋಡಿ ಮಾಡಿದ್ದ ಜೋಡಿ ಮತ್ತೆ ಸಿನಿ ಪ್ರಿಯರಿಗೆ ಅದೇ ಖುಷಿ ನೀಡಲು ಮುಂದಾಗಿದೆ. ಕನ್ನಡದ ಮೋಹಕ ತಾರೆ ರಮ್ಯ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಮತ್ತದೇ ಹೀರೋ ಜೊತೆ ಒಂದಾಗೋದಕ್ಕೆ ಎಲ್ಲಾ ಸಿದ್ಧತೆ ಕೂಡಾ ನಡೆದಿದೆಯಂತೆ ಹಾಗಿದ್ರೆ ಡೈರೆಕ್ಶನ್ ಜೊತೆ ನಾಯಕಿ ಯಾಗಿ ಹೊರ ಹೊಮ್ತಾರಾ ರಮ್ಯಾ ..?!
ಕೋಡಿ ರಾಮಕೃಷ್ಣರ ನಿರ್ದೇಶನದಲ್ಲಿ ಮೂಡಿ ಬಂದಿತ್ತು ಕನ್ನಡದಲ್ಲಿ ವಿಭಿನ್ನ ಚಿತ್ರ ನಾಗರಹಾವು. 2017 ರಲ್ಲಿ ಈ ಚಿತ್ರ ಕಮಾಲ್ ಮಾಡಿತ್ತು. ಅದೇ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ಮನಮೋಹಕ ದೃಶ್ಯದಲ್ಲಿ ಕಂಡು ಬಂದಿದ್ರು.
ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾ ಮೂಲಕ ಮೋಹಕ ತಾರೆ ರಮ್ಯಾ ಮತ್ತೆ ನಟಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಈಗ ಅದೇ ಸಿನಿಮಾದಲ್ಲಿ ದಿಗಂತ್ ಕೂಡ ನಟಿಸಲಿದ್ದಾರಂತೆ. ಚಿತ್ರತಂಡವಾಗಲಿ ಅಥವಾ ದಿಗಂತ್ ಆಗಲಿ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ, ಈ ಸುದ್ದಿಯಂತೂ ಭರ್ಜರಿ ಸುದ್ದಿ ಆಗುತ್ತಿದೆ.
ವಿಜಯ್ ಕಿರಗಂದೂರು ಅರ್ಪಿಸುವ,ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ಉತ್ತರಕಾಂಡ ಚಿತ್ರದ ನಾಯಕನಾಗಿ ಡಾಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ ‘ರತ್ನನ ಪ್ರಪಂಚ’ ಚಿತ್ರ ಪ್ರಚಂಡ ಯಶಸ್ಸು ಕಂಡಿತ್ತು. ಇದೇ ಕಾಂಬಿನೇಶನ್ ನಲ್ಲಿ ಹೊಯ್ಸಳ ಚಿತ್ರ ಸಹ ಬಂದಿತ್ತು, ಮೂರನೇ ಚಿತ್ರವಾಗಿ ಉತ್ತರಕಾಂಡ ನಿರ್ಮಾಣವಾಗಲಿದೆ.
ಕೆಲ ವರ್ಷಗಳ ಹಿಂದೆ ತೆರೆಕಂಡ ‘ನಾಗರಹಾವು’ ಚಿತ್ರದಲ್ಲಿ ರಮ್ಯಾ ಮತ್ತು ದಿಗಂತ್ ಒಟ್ಟಿಗೆ ನಟಿಸಿದ್ದರು. ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ 2017ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಮತ್ತೆ ರಮ್ಯಾ ಹಾಗೂ ದಿಂಗತ್ ಅವರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ.
Chaithra Vasudevan : ಭಾವುಕ ಪೋಸ್ಟ್ ಹಂಚಿಕೊಂಡ ಚೈತ್ರ ವಾಸುದೇವನ್…!
Baby movie: ಬೇಬಿ ಚಿತ್ರದ ಗೆಲುವಿನ ಖುಷಿ ಹಂಚಿಕೊಂಡ ವಿಜಯ್ ದೇವರಕೊಂಡ