Chaithra Vasudevan : ಭಾವುಕ ಪೋಸ್ಟ್ ಹಂಚಿಕೊಂಡ ಚೈತ್ರ ವಾಸುದೇವನ್…!

Film News : ಆಕೆ ಪಟ ಪಟ ಅಂತಾ ಮಾತಾಡಿ ಕನ್ನಡಿಗರ ಮನಗೆದ್ದ ನಟಿ ನಿರೂಪಕಿ ಕೂಡಾ ಹೌದು. ಸದಾ ಸೋಶಿಯಲ್ ಮೀಡಿಯಾದಲ್ಲಿ ಏಕ್ಟಿವ್ ಆಗಿರೋ ನಟಿ  ಚೈತ್ರಾ ವಾಸುದೇವ್ ಸದ್ಯ ಡಿವೋರ್ಸ್​ ನ ಭಾವುಕ ವಿಚಾರವನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ತುಂಬಾ ನೋವಿನಿಂದ ವಿಚ್ಛೇದನ ಪಡೆಯುತ್ತಿರುವ ವಿಚಾರ ಹಂಚಿಕೊಂಡ ಚೈತ್ರಾ. ಬೇಸರ ಮಾಡಿಕೊಂಡ ಅಭಿಮಾನಿಗಳಿಗೆ ಮೂಡಿವೆ ಸಾವಿರ ಪ್ರಶ್ನೆ.  ಕನ್ನಡ ಕಿರುತೆರೆ ಜನಪ್ರಿಯಾ ನಿರೂಪಕಿ ಚೈತ್ರಾ ವಾಸುದೇವನ್ ವಿಚ್ಛೇದನ ಪಡೆದಿರುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.

ಇಷ್ಟು ದಿನಗಳಿಂದ ಚೈತ್ರಾ ತುಂಬಾನೇ ಸೈಲೆಂಟ್ ಆಗಿದ್ದರು ಎಲ್ಲಿಯೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಹಾಗೆ ಹೀಗೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದರು. ಈಗ ಅದಕ್ಕೆಲ್ಲಾ ಚೈತ್ರಾ ಉತ್ತರ ಕೊಟ್ಟಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿ ನಂತರ ನಾನು ನನ್ನ ವಿಚ್ಚೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ನನ್ನ ಈ ಸ್ಥಿತಿಯಿಂದ ಹೊರ ಬರಲು ಕಷ್ಟ ಪಡುತ್ತಿದ್ದೀನಿ’

ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ’ನನ್ನ ಸೇವೆಯನ್ನು ಇನ್ನುಂದೆಯು ಮುಂದುವರೆಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದಾರೆ.

Baby movie: ಬೇಬಿ ಚಿತ್ರದ ಗೆಲುವಿನ ಖುಷಿ ಹಂಚಿಕೊಂಡ ವಿಜಯ್ ದೇವರಕೊಂಡ

Sandalwood-ಈ ಪಟ್ಟಣಕ್ಕೆ ಏನಾಗಿದೆ ? ಸಿನಿಮಾ

Kousalya Supraja Rama : ಮತ್ತೆ ಪ್ರೇಕ್ಷಕರ ಮನಗೆದ್ದ ಡಾರ್ಲಿಂಗ್ ಕೃಷ್ಣ.. ಕೌಸಲ್ಯಾ ಸುಪ್ರಜಾ ರಾಮ.. ಥಿಯೇಟರ್ ನಲ್ಲಿ ಸಂಭ್ರಮ…!

About The Author