Karkala News : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಕಾರ್ಕಳದ ಹಿರ್ಗಾನ ಗ್ರಾಮದ ತುಂಬೆ ಹಿತ್ತಿಲು ಪ್ರದೇಶದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸೈನಿಕ ಹಾಗೂ ಪ್ರಗತಿಪರ ಕೃಷಿಕ ಅಂತೋನಿ ಸಾಲಿಸ್ ಅವರು ಗಿಡ ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಸಂಸ್ಥೆಯ ಮಾರ್ಗದರ್ಶಕ ಪಿಡಿಜಿ ಡಾ. ಭರತೇಶ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸುರೇಂದ್ರ ನಾಯಕ್, ಪ್ರಶಾಂತ್ ಬೆಳಿರಾಯ, ಪ್ರಕಾಶ್ ಪೈ, ಶ್ರೀವರ್ಮ ಅಜ್ರಿ, ಸುಧೀರ್ ಕಾಮತ್, ಸತೀಶ್ ಪ್ರಭು ಪ್ರಕಾಶ್ ವಾಗ್ಳೆ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಸುರೇಶ್ ನಾಯಕ್ ಸ್ವಾಗತಿಸಿ, ಕಾರ್ಯದರ್ಶಿ ಉಪೇಂದ್ರ ವಾಗ್ಲೆ ವಂದಿಸಿದರು.
Janardhan Bhat : ಅರಿವು-ತಿಳಿವು ಕಾರ್ಯಕ್ರಮದಲ್ಲಿ ಲೂಸಿಯಾಡ್ಸ್, ಭಾರತದ ಅನ್ವೇಷಣೆ ಕುರಿತು ಉಪನ್ಯಾಸ
Pradeep Eshwar : ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರದೀಪ್ ಈಶ್ವರ್ ಬಂಪರ್ ಗಿಫ್ಟ್…!
Dog : ಸತ್ತ ನಾಯಿಯನ್ನು ತೆರವುಗೊಳಿಸದೆ ತಂಗುದಾಣದಲ್ಲಿ ಮಣ್ಣು ಸುರಿದ ಸ್ಥಳೀಯ ಪಂಚಾಯತ್…!




