Belthangadi News : ಜಿಂಕೆಗಳ ದಾಳಿಗೆ ಆಡುಗಳು ಬಲಿಯಾದ ಘಟನೆ ಮುಂಡಾಜೆಯ ಪರಮುಖದಲ್ಲಿ ನಡೆದಿದೆ.ಪ್ರಶಾಂತ ಪೂಜಾರಿಯವರು ತಮ್ಮ ಗದ್ದೆಯಲ್ಲಿ ಮೇಯಲು ಆಡುಗಳನ್ನು ಬಿಟ್ಟಿದ್ದ ಸಂದರ್ಭ ಜಿಂಕೆಗಳ ಗುಂಪು ದಾಳಿ ನಡೆಸಿ ಆಡುಗಳಿಗೆ ಹಾಯ್ದ ಪರಿಣಾಮ ಎರಡು ಆಡುಗಳು ಸತ್ತು ಬಿದ್ದಿವೆ.
ಇದರಲ್ಲಿ ಒಂದು ಗಬ್ಬದ ಆಡು ಹಾಗೂ ಇನ್ನೊಂದು ಗಂಡು ಆಡಾಗಿದ್ದು ಸುಮಾರು 15 ಸಾವಿರ ರೂ.ಮೌಲ್ಯದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಜಿಂಕೆಗಳ ಸಂಚಾರ ಹೆಚ್ಚಿದ್ದು ಶಾಲಾ ಮಕ್ಕಳು ಮತ್ತು ನಾಗರಿಕರು ಸಂಚರಿಸಲು ಭಯಪಡುವ ಸ್ಥಿತಿಯಿದೆ. ಈ ಪರಿಸರದ ಒಳ ರಸ್ತೆಗಳ ಅಲ್ಲಲ್ಲಿ ಕಂಡುಬರುವ ಜಿಂಕೆಗಳು ವಾಹನ ಸವಾರರಿಗೂ ಅಪಾಯಕಾರಿಯಾಗಿವೆ.
Siddaramaiah : ಉಡುಪಿ : ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ : ಸಿದ್ದರಾಮಯ್ಯ
Parking : ಪುಟ್ ಪಾತ್ ಮೇಲೆ ಪಾರ್ಕಿಂಗ್: ಹುಬ್ಬಳ್ಳಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಆಡಿದ್ದೇ ಆಟ..!




