ಹುಬ್ಬಳ್ಳಿ- ರಾಜ್ಯದಲ್ಲಿ ಉಡುಪಿ ಘಟನೆ ಮಾಸೋ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ..ಉಡುಪಿ ಕಾಲೇಜ್ ನಲ್ಲಿ ಶೌಚಾಲಯದ ಚಿತ್ರೀಕರಣ ಮಾಡಿದ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ.ಇದರ ಬೆನ್ನಲ್ಲೇ ಹುಬ್ಬಳ್ಳಿ ಸಮರ್ಥ ಕಾಲೇಜ್ ನಲ್ಲಿ ಹುಡಗಿಯರ ಫೋಟೋ ಬಳಿಸಿ ಕೆಟ್ಟದಾಗಿ ಪೋಸ್ಟ್ ಮಾಡಲಾಗಿದೆ..ಇನ್ ಸ್ಟಾ ಗ್ರಾಂ ನಲ್ಲಿ ಹುಡಗೀರ ಫೊಟೋ ಬಳಸಿ ಕೆಟ್ಟದಾಗಿ ಬರೆಯಲಾಗಿದೆ..ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಹುಡಗೀರ ಫೋಟೋ ಬಳಸಿದ್ದು,ಇದೀಗ ಕಾಲೇಜ್ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.ಸಮರ್ಥ ಕಾಲೇಜ್ ನಲ್ಲಿ ಇಂತಹದ್ದೊಂದು ಘಟನೆ ಬೆಳಕಿಗೆ ಬರುತ್ತಲೇ ಖಾಕಿ ಅಲರ್ಟ್ ಆಗಿ ಕಾಲೇಜ್ ಆಡಳಿತ ಮಂಡಳಿಯನ್ನು ವಿಚಾರಣೆ ಮಾಡಿದೆ..
ಒಂದು ಕಡೆ ಇನ್ ಸ್ಟಾ ಗ್ರಾಂ ನಲ್ಲಿ ಹುಡಗೀರ ಫೋಟೋ ಬಳಸಿ ಅವಾಚ್ಯ ಶಬ್ದ ಬಳಕೆ ಮಾಡಿ ಪೋಸ್ಟ್ ಮಾಡಿರೋ ದೃಶ್ಯ..ಇನ್ನೊಂದು ಕಡೆ ಕಾಲೇಜ್ ಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು.ಮತ್ತೊಂದು ಕಡೆ ಕಾಲೇಜ್ ಸಿಬ್ಬಂದಿಯನ್ನು ವಿಚಾರಣೆ ಮಾಡ್ತಿರೋ ಪೊಲೀಸರು.ಹೌದು ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.ಹುಬ್ಬಳ್ಳಿಯ ಶಿರೂರ ಪಾರ್ಕ್ ಬಳಿ ಇರೋ ಸಮರ್ಥ ಖಾಸಗಿ ಕಾಲೇಜ್ ನಲ್ಲಿ ಹುಡಗೀಯರನ್ನ ಟಾರ್ಗೆಟ್ ಮಾಡಲಾಗಿದೆ.ಇನ್ ಸ್ಟಾ ದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಾಲೇಜ್ ಹುಡಗಿಯರ ಫೋಟೋ ಬಳಸಿ ಅವಾಚ್ಯ ಶಬ್ದಗಳಿಂದ ಬರೆಯಲಾಗಿದೆ.ಕಾಶ್ಮೀರಿ 1990_0 ನೇಮ್ ನ ಇನ್ ಸ್ಟಾ ಅಕೌಂಟ್ ನಲ್ಲಿ ಇಂತಹ ಫೋಟೋಗಳು ಹರಿದಾಡುತ್ತಿವೆ. ಆ ಅಕೌಂಟ್ ನಲ್ಲಿ ಸಮರ್ಥ ಕಾಲೇಜ್ ಲೋಗೋ ಕೂಡಾ ಬಳಸಲಾಗಿದೆ.ಕಾಲೇಜ್ ಹುಡಗೀರ ಫೋಟೋ ಹೇಗೆ ಬೇಕೋ ಹಾಗೇ ಎಡಿಟ್ ಮಾಡಿದ ಕಿಡಗೇಡಿ ಅದನ್ನೆ ಇನ್ ಸ್ಟಾ ದಲ್ಲಿ ಅಪ್ಲೋಡ್ ಮಾಡಿದ್ದಾನೆ..ಕೇವಲ ಫೋಟೋ ಅಷ್ಟೆ ಅಲ್ಲ ಅಪ್ಲೋಡ್ ಮಾಡಿ ಕೆಟ್ಟದಾಗಿ ಬರೆದಿದ್ದಾನೆ..ಇನ್ ಸ್ಟಾ ದಲ್ಲಿ ಧಮ್ ಬೇಕ್ರಲೇ,ಹುಡಕೀನಿ ಅಂತಾ ಅಲ್ಲ,ಹುಡಕಿ ಪೊಲೀಸ್ ,ಸೈಬರ್,ರಾಜಕಾರಣಿಗಳೇ ಅರ್ಥ ಮಾಡಕೋಳಿ ಎಂದು ಸವಾಲ್ ಹಾಕಿದ್ದಾನೆ.ಇದಲ್ಲದೆ ಕಿಡಗೇಡಿ ನೆಕ್ಸ್ಟ ಟಾರ್ಗೆಟ್ ಏನು,ಅವನ ಕಡೆ ಇರೋ ಫೋಟೋ ಬಗ್ಗೆ ನೂ ಪೋಸ್ಟ್ ಮಾಡಿದ್ದಾನೆ.ಯಾವಾಗ ಇಂತಹ ಪೋಸ್ಟ್ ಓಡಾಡುತ್ತವೇಯೂ ಕಾಲೇಜ್ ವಿದ್ಯಾರ್ಥಿಗಳು ಗಾಬರಿ ಆಗ್ತಾರೆ.ಕಳೆದ ರವಿವಾರವೇ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರ್ತಾರೆ.ಆದ್ರೆ ವಿದ್ಯಾರ್ಥಿಗಳು ದೂರು ಕೊಡಲುಮುಂದೆ ಬರಲ್ಲ.ಇಂದು ಅದೇ ನಾಲ್ವರು ವಿದ್ಯಾರ್ಥಿಗಳು ಹುಬ್ಬಳ್ಳಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಯಾವಾಗ ವಿದ್ಯಾರ್ಥಿಗಳು ದೂರು ನೀಡ್ತಾರೋ ಖಾಕಿ ಅಲರ್ಟ್ ಆಗಿ ಕಾಲೇಜ್ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನ ವಿಚಾರಣೆ ಮಾಡಿದ್ದಾರೆ
ಇದು ಇಂದು ನಿನ್ನೆ ನಡೆದ ಘಟನೆಯಲ್ಲ.ಜೂನ್ 20 ರಿಂದಲೇ ಯಾರೋ ಕಿಡಗೇಡಿಗಳು ಹುಡಗೀರ ಫೋಟೋ ಬಳಸೋ ಬಗ್ಗೆ ವಿದ್ಯಾರ್ಥಿಗಳು ಕಾಲೇಜ್ ಆಡಳಿತ ಮಂಡಳಿ ಗಮನಕ್ಕೆ ತಂದಿತ್ತು.ಆದ್ರೆ ಕಾಲೇಜ್ ಆಡಳಿತ ಮಂಡಳಿ ದೂರು ಕೊಡೋಕೆ ಹೋಗಿಲ್ಲ.ವಿದ್ಯಾರ್ಥಿಗಳ ಬಳಿ ಕೇಳಿ ಸುಮ್ಮನಾಗಿದೆ.ಜೂನ್ 20 ರಿಂದ ಕಿಡಗೇಡಿ ಕಾಲೇಜ್ ವಿದ್ಯಾರ್ಥಿಗಳ ಫೊಟೋ ವಿಕೃತವಾಗಿ ಎಡಿಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾನೆ.ಕಾಲೇಜ್ ಆಡಳಿತ ಮಂಡಳಿ ಗೆ ಹೇಳಿದರೂ ಯಾವದೇ ಪ್ರಯೋಜನ ಆಗದೆ ಇದ್ದಾಗ ನಾಲ್ವರು ವಿದ್ಯಾರ್ಥಿಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಸಮರ್ಥ ಕಾಲೇಜ್ ನಲ್ಲಿ ನಡೆಯೋ ಪ್ರತಿಯೊಂದು ಘಟನೆ ಬಗ್ಗೆ ಕಿಡಗೇಡಿಗೆ ಗೊತ್ತಾಗತ್ತೆ ಅಂತೆ.ಇದನ್ನು ಸ್ವತಃ ಕಾಲೇಜ್ ವಿದ್ಯಾರ್ಥಿಗಳು ಪೊಲೀಸರ ಬಳಿ ಹೇಳಿದ್ದಾರೆ.ಹೀಗಾಗಿ ಪೊಲೀಸರು ಕಾಲೇಜು ವಿದ್ಯಾರ್ಥಿಯೇ ಈ ರೀತಿ ಮಾಡ್ತಿರಬಹುದು ಅನ್ಮೋ ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇ ಅನುಮಾನದ ಮೇಲೆ ಸಮರ್ಥ ಕಾಲೇಜ್ ನ ಕೆಲ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಪೊಲೀಸರು ವಿಚಾರಣೆ ಮಾಡ್ತೀದಾರೆ.ಕಳೆದ ರವಿವಾರವೇ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಹೋಗಿದ್ರು,ಆದರೆ ಅಂದು ವಿದ್ಯಾರ್ಥಿಗಳು ದೂರು ದಾಖಲಿಸಿರಲಿಲ್ಲ,ಇಂದು ವಿದ್ಯಾರ್ಥಿಗಳ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು,ಪೊಲೀಸರು ಸಮರ್ಥ ಕಾಲೇಜ್ ವಿದ್ಯಾರ್ಥಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು,ಕಾಲೇಜ್ ಆಡಳಿತ ಮಂಡಳಿಯನ್ನು ವಿಚಾರಣೆ ಮಾಡೋದಾಗಿ ತಿಳಿಸಿದ್ದಾರೆ…
ಒಟ್ಟಾರೆ ಉಡುಪಿ ಘಟನೆ ಮಾಸೋ ಮುನ್ನವೇ ಹುಬ್ಬಳ್ಳಿಯಲ್ಲಿ ಅಂತಹದ್ದೊಂದು ಘಟನೆ ಬೆಳಕಿಗೆ ಬಂದಿದೆ. ಕಳೆದ ಮೂರು ತಿಂಗಳ ಹಿಂದೆ ಕಾಲೇಜ್ ಆಡಳಿತ ಮಂಡಳಿಗೆ ವಿಷಯ ಗೊತ್ತಿದ್ರು,ಆಡಳಿತ ಮಂಡಳಿ ಸೈಲೆಂಟ್ ಆಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಲೇಜ್ ವಿದ್ಯಾರ್ಥಿಗಳ ಮಾನ ಹರಾಜು ಆಗ್ತಿದ್ರು,ಕಾಲೇಜ್ ಆಡಳಿತ ಮಂಡಳಿ ದೂರು ಕೊಡದೆ ನಿರ್ಲಕ್ಷ್ಯ ವಹಿಸಿದೆ.ಕಾಲೇಜ್ ಗೆ ಬಂದ ವಿದ್ಯಾರ್ಥಿಗಳ ಮಾನ ಕಾಪಾಡೋದರಲ್ಲಿ ವಿಫಲವಾದ ಆಡಳಿತ ಮಂಡಳಿಗೂ ತಕ್ಕ ಶಿಕ್ಷೆಯಾಗಬೇಕಿದ.ಇನ್ನು ಪೊಲೀಸರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಭಯ ಹುಟ್ಟಿಸಿರೋ ಕಿಡಗೇಡಿ ಹೆಡೆಮುರಿ ಕಟ್ಟಿ ತಕ್ಕ ಶಾಸ್ತಿ ಮಾಡಬೇಕಿದೆ.
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ
Anganavadi Warden: ಗ್ರಾಮಸ್ಥರ ವಿರುದ್ದ ಅಂಗನವಾಡಿ ಕಾರ್ಯಕರ್ತೆಯ ದರ್ಪ
Shivaraj Tangadagi : ಸರ್ಕಾರದ ಯೋಜನೆ ಜನರಿಗೆ ನೇರವಾಗಿ ತಲುಪಬೇಕು: ಸಚಿವ ತಂಗಡಗಿ