Fridge : ಪ್ರಿಡ್ಜ್ ಗಾಗಿ ಹೋಯಿತು ಗರ್ಭಿಣಿ ಪ್ರಾಣ…! ಕೊಂದೇ ಬಿಟ್ಟ ಪಾಪಿಗಳು..!

Bihar News : ವರದಕ್ಷಿಣೆಯಾಗಿ ಮದುವೆ ಸಮಯದಲ್ಲಿ ಫ್ರಿಡ್ಜ್ ಗಿಫ್ಟ್ ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ.

ಅಂಗೂರಿ ಬೇಗಂ (30) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು. ಇದೀಗ ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು ಬಾಮೈದರೇ ಕೊಲೆ ಮಾಡಿದ್ದಾರೆ. ಕೊಲೆ ನಡೆದ ಬೆನ್ನಲ್ಲೇ ಅಂಗೂರಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಅಂಗೂರಿ ಮೃತದೇಹವನ್ನು ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಈ ವೇಳೆ ಆಕೆ 7 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ.

ATM : ಎಟಿಎಂ ಗೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನ..!

IndiGo Flight : ಪಾಟ್ನಾದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ…!

Rain : ಉತ್ತರಾಖಂಡ : ಭಾರೀ ಮಳೆಯಿಂದಾಗಿ ಭೂಕುಸಿತ

 

About The Author