ಹುಬ್ಬಳ್ಳಿ: ಪ್ರತಿದಿನ ನಾವು ಸಿಕ್ಕ ಸಿಕ್ಕ ಜಾಗಗಳಲ್ಲಿ ಯುವಕರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ನೋಡುತ್ತಿದ್ದೇವೆ ಆದರೆ ಕೆಲವೊಂದಿಷ್ಟು ಸ್ಥಳಗಳನ್ನು ಇಂತಹ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ದೂರು ಉಳಿಸಲು ಅಂತಹ ಸ್ಥಳಗಳಿಗೆ ನಿರ್ಬಂಧ ಹೇರಲಾಗುತ್ತದೆ. ಅಷ್ಟಿದ್ದರೂ ನಿಯಮ ಉಲ್ಲಂಘನೆ ಮಾಡಿ ಯುವಕರು ಹುಚ್ಚಾಟವನ್ನು ಮೆರೆಯುತ್ತಾರೆ. ಇಂತಹದೆ ಒಂದು ಘಟನೆ ನಾವು ಹೇಳ್ತಿವಿ ಕೇಳಿ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಆಸ್ಪತ್ರೆಯ ನರ್ಸ್ಗಳನ್ನು ಗುರಿಯಾಗಿಟ್ಟುಕೊಂಡು ರೀಲ್ಸ್ ಮಾಡಿದ್ದಾರೆ .ಇದರಿಂದಾಗಿ ಬೆಸತ್ತ ನರ್ಸಗಳ ಸದ್ಯ ಈ ವಿಡಿಯೋ ಫುಲ್ ವೈರಲ್ ಆದ ಹಿನ್ನೆಲೆ, ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಕೆಂಡಾಮಂಡಲವಾದ ಕಿಮ್ಸ್ ಆಸ್ಪತ್ರೆ ನರ್ಸ್ ಗಳು ವೈದ್ಯಕೀಯ ವಿದ್ಯಾರ್ಥಿಗಳ ವರ್ತನೆಯಿಂದ ಬೇಸತ್ತು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಮತ್ತು ಧಾರವಾಡ ಜಿಲ್ಲಾ ಶುಶ್ರೂಷಕರ ಸಂಘದಿಂದ ಪತ್ರ ಕಿಮ್ಸ್ ನಿದೇರ್ಶಲಕರಿಗೆ ಪತ್ರ ಬರೆದಿದ್ದಾರೆ.
ಇನ್ನು ಈ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಯಾವುದೇ ಅನುಮತಿ ಇಲ್ಲದೆ ರೀಲ್ಸ್ ಮಾಡಿದ್ದು . ನಟ ಪ್ರಜ್ವಲ್ ದೇವರಾಜ ಅಭಿನಯದ ಭದ್ರ ಚಿತ್ರದಲ್ಲಿ ಬರುವ ನಂಬೇಡ ನಂಬೇಡ ಹುಡುಗೀರನ್ನು ನಂಬೇಡ ಎನ್ನುವ ಹಾಡಿಗೆ ನಂಬೇಡ ನಂಬೇಡ ನರ್ಸುಗಳನ್ನು ನಂಬೇಡ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಈ ರೀಲ್ಸ್ ಮಹೇಶ್ ರೆಡ್ಡಿ ಎನ್ನವವರು ಅಕೌಂಟ್ ನಿಂದ ಪೋಸ್ಟ್ ಆಗಿದೆ.
Oppen heimer ‘ಓಪನ್‌ಹೈಮರ್’ ನಲ್ಲಿ ಯಾವುದೇ ಅಳಿಸಲಾದ ದೃಶ್ಯಗಳಿಲ್ಲ: ಸಿಲಿಯನ್ ಮರ್ಫಿ
AAP: ಭ್ರಷ್ಟ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ತಕ್ಷಣ ವಜಾಗೊಳಿಸಿ: ಎಎಪಿ ಆಗ್ರಹ

