- Advertisement -
ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ನ್ನು ಮಾಡಿದ್ದು ಕಾಂಗ್ರೆಸ್ ಸಚಿವರನ್ನೇ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಮುಂದಾಗಿದೆ. ಪ್ರಹ್ಲಾದ್ ಜೋಷಿ ಅವರನ್ನು ಕಟ್ಟಿಹಾಕಲು ಕೈ ಪಡೆ ಹಲವು ರೀತಿಯಲ್ಲಿ ರಣತಂತ್ರ ಹೂಡುತ್ತಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಕಣಕ್ಕಿಳಿಯಲು ಸಿದ್ದತೆ ನಡೆಸುಕೊಳ್ಳುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿ ಭದ್ರ ಕೋಟೆಯನ್ನು ಛಿದ್ರ ಮಾಡಲು ಹೈಕಮಾಂಡ್ ಗೆ ಸೂಚನೆ ನೀಡಿದ್ದಾರೆ.
ಹೈ ಕಮಾಂಡ ಸೂಚನೆಯಂತೆ ಈಗಾಗಲೇ ಮೇಲಿಂದ ಮೇಲೆ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಜೊತೆ ಸಚಿವ ಸಂತೊಷ್ ಲಾಡ್ ಸಭೆ ಕರೆದಿದ್ದಾರೆ.
- Advertisement -

