Wednesday, September 11, 2024

Latest Posts

DKS: ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸುರೇಶ್ ಕುಮಾರ್ ಯಾಕೆ ಪತ್ರ ಬರೆಯಲಿಲ್ಲ ?

- Advertisement -

ರಾಜಕೀಯ ಸುದ್ದಿ: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಮೇಲೆ ಪ್ರಕರಣ ಇರಲಿಲ್ಲವೇ? ಆಗ ಅವರು ನ್ಯಾಯಾಂಗಕ್ಕೆ ಸಂಬಂಧಿಸಿದ್ದ ಕಾರ್ಯಕ್ರಮಗಳಲ್ಲಿ ಹೇಗೆ ಭಾಗವಹಿಸುತ್ತಿದ್ದರು? ನನಗೆ ಯಾರಿಗೂ ಮುಜುಗರ ತರುವ ಉದ್ದೇಶವಿಲ್ಲ. ನನಗೆ ಅಂತಹ ಕಾರ್ಯಕ್ರಮಕ್ಕೆ ಹೋಗುವ ಆಸಕ್ತಿಯೂ ಇಲ್ಲ. ಕೆಲವು ನ್ಯಾಯಾಧೀಶರು ಕೂಡ ತಮ್ಮ ಮನೆಯಲ್ಲಿನ ಮದುವೆಗೂ ನನಗೆ ಆಮಂತ್ರಣ ನೀಡಿದ್ದರು.

ನಾನು ಅವರ ಮದುವೆಯಲ್ಲಿ ಭಾಗವಹಿಸಿದರೆ ಇಂತಹ ಪ್ರಶ್ನೆಗಳು ಉದ್ಭವಿಸುತ್ತವೆ ಎಂಬ ಕಾರಣಕ್ಕೆ ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ನಾನು ಈಗ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದು, ಅನೇಕ ನ್ಯಾಯಾಲಯದ ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮೇಲೆ ರಾಜಕೀಯ ಪ್ರೇರಿತ ಪ್ರಕರಣಗಳಿದ್ದು, ನನ್ನನ್ನು ದೋಷಿ ಎಂದು ತೀರ್ಮಾನ ಮಾಡಲಾಗಿಲ್ಲ. ನನ್ನ ಜತೆಗೆ ಯಡಿಯೂರಪ್ಪ ಅವರು ಅನೇಕ ಪ್ರಕರಣ ಎದುರಿಸುತಿದ್ದರು. ಆವರು ಮುಖ್ಯಮಂತ್ರಿಯಾಗಿದ್ದಾಗ ಸುರೇಶ್ ಕುಮಾರ್ ಗೆ ಈ ವಿಚಾರ ತಿಳಿದಿರಲಿಲ್ಲವೇ? ಆಗ ಯಾಕೆ ಪತ್ರ ಬರೆಯಲಿಲ್ಲ? ಅವರಿಗೊಂದು ನ್ಯಾಯ? ನನಗೊಂದು ನ್ಯಾಯವೇ ಇದೆಲ್ಲವನ್ನು ನಾನು ರಾಜಕೀಯವಾಗಿಯೇ ಎದುರಿಸುತ್ತೇನೆ” ಎಂದು ತಿಳಿಸಿದರು.

“ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೆಲವು ಜಿಲ್ಲೆಗಳ ಶಾಸಕರುಗಳ ಜತೆ ಇಂದು ಆಯಾ ಕ್ಷೇತ್ರಗಳ ವಿಚಾರವಾಗಿ ಚರ್ಚೆ ಮಾಡಿದ್ದು, ರಾಜಕೀಯವಾಗಿ ಮಾರ್ಗದರ್ಶನ ನೀಡಿದ್ದೇವೆ. ಅವರ ಅಹವಾಲುಗಳನ್ನು ಆಲಿಸಿದ್ದೇವೆ. ಇದರ ಜತೆಗೆ ನಮ್ಮ ಸರ್ಕಾರದ ಕಾರ್ಯಕ್ರಮಗಳ ಜಾರಿ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸತತವಾಗಿ ಒಂದು ವಾರಗಳ ಕಾಲ ಈ ರೀತಿ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಅನಗತ್ಯ ಸರ್ಕಾರ ನಮ್ಮ ಶಾಸಕರ ಜತೆಗೂ ಸಭೆ ಮಾಡಬಹುದಾಗಿತ್ತು ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, “ನಾವು ಅವರ ಪಕ್ಷದ ಶಾಸಕರ ಜತೆಗೂ ಸಭೆ ಮಾಡುತ್ತೇವೆ. ಅವರ ಜತೆ ಸಭೆ ಮಾಡುವುದಿಲ್ಲ ಎಂದು ಯಾರು ಹೇಳಿದರು? ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಿಗೆ ಕೊಟ್ಟ ಮಾತಿನಂತೆ ಸಭೆ ಮಾಡುತ್ತಿದ್ದೇವೆ. ಎಲ್ಲರನ್ನು ಒಟ್ಟಿಗೆ ಕರೆದು ಜಗಳಕ್ಕೆ ಬಿಡಲು ಸಾಧ್ಯವೇ? ಬೆಂಗಳೂರಿನ ಕೆಲವು ವಾರ್ಡ್ ಗಳಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಇಂದು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಸಾವಿರ ಕೋಟಿ ಬಾಕಿ ಇದ್ದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 170 ಕೋಟಿ ಮಾತ್ರ ಬಾಕಿ ಇದೆ. ಇದೆಲ್ಲವೂ ಸತ್ಯ ಅಲ್ಲವೇ? ಮೊದಲು ನಮ್ಮ ಪಕ್ಷದ ಶಾಸಕರ ಅಹವಾಲು ಆಲಿಸುತ್ತೇವೆ” ಎಂದು ತಿಳಿಸಿದರು.

ಇನ್ನು ಟನಲ್ ರಸ್ತೆ ವಿಚಾರವಾಗಿ ಸಂಸ್ಥೆಯೊಂದರ ಜತೆಗಿನ ಸಭೆ ಬಗ್ಗೆ ಕೇಳಿದಾಗ, “ಫ್ಲೈ ಓವರ್, ಟನಲ್ ರಸ್ತೆ ಸೇರಿದಂತೆ ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ವಿಚಾರವಾಗಿ ನಾವು ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಅನ್ನು ಕರೆದಿದ್ದೆವು. ಕೇವಲ 2 ಸಂಸ್ಥೆಗಳು ಮಾತ್ರ ಮುಂದೆ ಬಂದಿದ್ದು, ಇನ್ನು ಹೆಚ್ಚಿನ ಸಂಸ್ಥೆಗಳು ಭಾಗವಹಿಸಬೇಕು ಎಂಬ ಉದ್ದೇಶದಿಂದ ಇದರ ಅವಧಿಯನ್ನು ಇನ್ನು 7 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ರಚನೆ, ಆರ್ಥಿಕತೆ ಸೇರಿದಂತೆ ಎಲ್ಲಾ ಆಯಾಮದಲ್ಲಿ ಮಾಹಿತಿ ಪಡೆಯಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇದನ್ನು ಕರೆಯಲಾಗಿದೆ” ಎಂದು ತಿಳಿಸಿದರು.

DK Shivakumar: ಕುಮಾರಕೃಪಾ ಅತಿಥಿಗೃಹದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:

AAP: ಭ್ರಷ್ಟ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ತಕ್ಷಣ ವಜಾಗೊಳಿಸಿ: ಎಎಪಿ ಆಗ್ರಹ

Rahul Gandhi : ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹವಾದಷ್ಟೇ ಬೇಗ ಆದೇಶ ತೆರವಾಗಬೇಕು : ಡಿಸಿಎಂ ಡಿ.ಕೆ.ಶಿ

- Advertisement -

Latest Posts

Don't Miss