ಶಿಕಾರಿಪುರ ಜನರಿಗೆ ಕಳಪೆ ಗುಣಮಟ್ಟದ ಅಕ್ಕಿ

ಮಂಡ್ಯ : ಲಾಕ್ ಡೌನ್ ಹಿನ್ನೆಲೆ ಎರಡು ತಿಂಗಳ ಪಡಿತರವನ್ನ ಸರ್ಕಾರ ಉಚಿತವಾಗಿ ಹಾಗೂ ಮುಂಚಿತವಾಗಿ ನೀಡ್ತಿದೆ. ಆದ್ರೆ ಕೊಟ್ಟಿರುವ ಅಕ್ಕಿ ಕಳಪೆ ಗುಣಮಟ್ಟದಿಂದ ಕೂಡಿದ್ದು ನಾವು ಈ ಅಕ್ಕಿಯನ್ನ ತಿಂದರೆ ಕೊರೊನಾಗಿಂತ ಹೆಚ್ಚು ಅಪಾಯ ಆಗುತ್ತೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ

ಮಂಡ್ಯ ಜಿಲ್ಲೆ ಪಾಂತವಪುರ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ಸರ್ಕಾರ ನೀಡಿರುವ ಕಳಪೆ ಗುಣಮಟ್ಟದ ಅಕ್ಕಿ ಇದು. ಸರ್ಕಾರದಿಂದ ಪಡಿತರ ಚೀಟಿ ಇಲ್ಲದವರಿಗೆ ಕುಟುಂಬವೊಂದಕ್ಕೆ 10ಕೆಜಿ ಅಕ್ಕಿ, ಅಲಸಂಧೆ  ಕಾಳು, ಉಪ್ಪು, ಎಣ್ಣೆ, ಕಡ್ಲೆಬೇಳೆ ವಿತರಿಸಬೇಕಿದೆ.. ಹಕ್ಕಿಪಿಕ್ಕಿ ಜನಾಂಗದ  9 ಕುಟುಂಬದ ಜನರಿಗೆ ಕೇವಲ 10 ಕೆಜಿ ಅಕ್ಕಿ ನೀಡಿ ತಾಲೂಕು ಆಡಳಿತ ಮಂಡಳಿ ಕೈತೊಳೆದು ಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ..

https://www.youtube.com/watch?v=6Wez-4ZBcvY

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

About The Author