Political News : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಯತ್ನಾಳ್ ಮುಂದಿನ 6 ತಿಂಗಳಿನಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಚುನಾವಣೆಯಲ್ಲಿ ತಮ್ಮ ವಿಜಯಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೇ ಕೊಡುವುದಕ್ಕೆ ಸರ್ಕಾರದಲ್ಲಿ ಅನುದಾನ ಇಲ್ಲ. ಹೀಗಾಗಿ ಅವರ ಶಾಸಕರೇ ಅಳುತ್ತಿದ್ದಾರೆ.
ಇನ್ನು, ವಿರೋಧ ಪಕ್ಷದ ನಮಗೆ ಎಲ್ಲಿಂದ ಅನುದಾನ ಕೊಡ್ತಾರೆ? ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮದ್ಯೆ ಪೈಪೋಟಿ ಇದ್ದು ಇವರಿಬ್ಬರ ಮಧ್ಯೆ ಶಾಸಕರು ನಮಗೇನು ಸಿಗುತ್ತಿಲ್ಲ ಅಂತ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಇನ್ನು, ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತದೆ. ಕಾರ್ಯಕರ್ತರು ಸಮಾಧಾನದಿಂದ ಇರಬೇಕುಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಇದೇ ವೇಳೆ ಕರೆ ನೀಡಿದರು.
DK Shivakumar : ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರಿಂದ ಮಾತ್ರ ಕಮಿಷನ್ ಆರೋಪ : ಡಿಸಿಎಂ ಡಿ.ಕೆ. ಶಿವಕುಮಾರ್
ಗೃಹಲಕ್ಷ್ಮೀ ಯೋಜನೆ ಉದ್ಘಾಟನೆಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ – ಸಿಎಂ ಸಿದ್ದರಾಮಯ್ಯ