ಬೆಂಗಳೂರು : ಒಂದೆಡೆ ಕೊರೊನಾ ಭಯಾನಕವಾಗಿ ಜನರ ಉಸಿರನ್ನ ನಿಲ್ಲಿಸಿದ್ರೆ ಮತ್ತೊಂದೆಡೆ ಲಾಕ್ ಡೌನ್ ನಿಂದ ಬೆಂಗಳೂರಲ್ಲಿ ಲಕ್ಷಾಂತರ ಜನ ತುತ್ತು ಊಟಕ್ಕೂ ಪರದಾಡುವಂತೆ ಮಾಡ್ತಿದೆ.. ಸಾಕಷ್ಟು ಜನ ನಿರಂತರವಾಗಿ ಬೀದಿ ಬೀದಿ ಅಲೆದು ಹಸಿವನ್ನ ನೀಗಿಸುವ ಕೆಲಸ ಮಾಡ್ತಿದ್ದಾರೆ. ಅದರಲ್ಲಿ “ಕೊಡೋಣ” ತಂಡದ ಪಾತ್ರ ಮುಖ್ಯವಾದದ್ದು ಅಂದ್ರೆ ತಪ್ಪಾಗಲ್ಲ.. ಬೆಂಗಳೂರಲ್ಲಿ ಬಹುತೇಕ ರಾಜಕಾರಣಿಗಳು ಫೋಟೋ ಪೋಸ್ ಗಾಗಿ ಸಹಾಯ ಮಾಡ್ತಿರೋದೇ ಹೆಚ್ಚು.. ರಾಜಕಾರಣಿಗಳನ್ನ ಹೊರತುಪಡಿಸಿದ್ರೆ ಉಳಿದ ಸಂಘಟನೆಗಳು ನಿಸ್ವಾರ್ಥ ಸೇವೆ ಮಾಡ್ತಿದ್ದಾರೆ. ಅದರಲ್ಲೂ ಕೊಡೋಣ ತಂಡ ಮಾತ್ರ ಯಾರಿಗೆ ಊಟ, ದಿನಸಿ ವಿತರಣೆ ಮಾಡಿ ಫೊಟೋ ತೆಗೆದ್ರು ಅವರ ಮುಖ ತೋರಿಸಲ್ಲ.. ಕೊಟ್ಟವರು, ಇಸ್ಕಂಡವರ ಮುಖ ಕಾಣಿಸಲ್ಲ.. ಯಾಕಂದ್ರೆ ಕೊಟ್ಟು ಕೈ ಕೂಡ ಗೊತ್ತಾಗಬಾರದು. ಹಾಗೆಯೇ ಪಡೆದವ ಪಾಡು ಸಹ ಜಗತ್ತಿಗೆ ತಿಳೀಯವಾರದು ಅನ್ನೋದ “ಕೊಡೋಣ” ಉದ್ದೇಶ.

ಈ ತಂಡದಲ್ಲಿ ಪತ್ರಕರ್ತ ಮಿತ್ರರೂ ಸೇರಿದಂತೆ ಸಹೃದಯಿಗಳು ಇದೆ.. ಈ ಟೀಂ ನಿಸ್ವಾರ್ಥ ಸೇವೆ ಮಾಡ್ತಿದೆ. ಲಾಕ್ ಡೌನ್ ಆದಾಗಿನಿಂದಲೂ ಜನರ ಹಸಿವನ್ನ ನೀಗಿಸುವದರ ಜೊತೆ ಕಣ್ಣೀರನ್ನ ಓರೆಸುತ್ತಿದೆ. ಇಂಥಹ ನಿಸ್ವಾರ್ಥ ತಂಡಕ್ಕೆ ನಾವೂ ಏನಾದ್ರೂ ಕೈಲಾದಷ್ಟು ಕೊಡೋಣ’

ಕೊಡೋಣ ತಂಡದ ಫೋನ್ ಪೇ ನಂಬರ್, ಗೂಗಲ್ ಪೇ ನಂಬರ್ ‘ 9741156789
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ,
