ಕರ್ನಾಟಕ ಟಿವಿ : ಕೋವಿಡ್ 19 ವಿಸ್ತರಿತ ಲಾಕ್ಡೌನ್ ಹಿನ್ನೆಲೆಯಲ್ಲಿ ಹಾಗು ಹಲವು ಕಾಖಾ೯ನೆಗಳಲ್ಲಿ ಉತ್ಪಾಧನೆ ಆರಂಭಕ್ಕೆ ಅನುಮತಿಯನ್ನು ನೀಡಿರುವ ಕಾರಣ ಮಾಲೀಕರು ಕಾಮಿ೯ಕರನ್ನು ಕೆಲಸಕ್ಕೆ ಹಾಜರಾಗಲು ಕೋರುತ್ತಿದ್ದಾರೆ. ಕೆಲಸಕ್ಕೆ ಬಾರದಿದ್ದರೆ ಸಂಬಳವಿಲ್ಲ ಎನ್ನುತ್ತಿದ್ದಾರೆ, ಕೆಲಸದಿಂದಲೂ ತೆಗೆಯುವ ಮಾತನಾಡುತ್ತಿದ್ದಾರೆ. ಆದರೆ ಯುಗಾದಿ ಹಬ್ಬಕ್ಕೆಂದು ಊರಿಗೆ ಹೋದ ಲಕ್ಷಾಂತರ ಕಾಮಿ೯ಕರು ಲಾಕ್ಡೌನಿಂದಾಗಿ ವಾಪಸ್ಸು ಬರಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಿ೯ಕರ ವೇತನ ಹಾಗೂ ಉದ್ಯೋಗ ಉಳಿಸಲು ಅಗತ್ಯ ಕ್ರಮವಹಿಸಲು ಸಿಪಿಎಂ ಮುಖಂಡ ಕೆ.ಎನ್ ಉಮೇಶ್ ಒತ್ತಾಯಿಸಿದ್ದಾರೆ..

ಕಳೆದ ಹಲವು ವರ್ಷಗಳಲ್ಲಿ ರಾಷ್ಟ್ರದಲ್ಲಿನ ಕಾಖಾ೯ನೆಗಳ ವಾಷಿ೯ಕ ನಿವ್ವಳ ಮೌಲ್ಯ ವಧ೯ನೆಯಲ್ಲಿ ಕಾಮಿ೯ಕರ ವೇತನದ ಪಾಲು ಕೇವಲ 15 ಶೇಕಡವಾಗಿದ್ದರೆ ಮಾಲೀಕರ ಲಾಭದ ಪಾಲು 47 ಶೇಕಡವಾಗಿದೆ. ಹೀಗಿದ್ದೂ ಸಹಾ ಮಾಲೀಕರು ರಾಷ್ಟ್ರವು ಸಂಕಷ್ಟದಲ್ಲಿರುವಾಗ ಕಾಮಿ೯ಕರಿಗೆ ವೇತನ ನೀಡಲು ಮುಂದೆ ಬಾರದೆ ಸಬೂಬು ನೀಡುತ್ತಿರುವುದು ಅವರ ಲಾಭಕೋರತನದ ಬಂಡವಾಳಶಾಹಿ ವಗ೯ ಗುಣವನ್ನು ತೋರುತ್ತದೆ. ಬಂಡವಾಳದ ಲಾಭಿಗೆ ಸಕಾ೯ರ ಮಣಿದು ಕಾಮಿ೯ಕರಿಗೆ ದ್ರೋಹ ಬಗೆಯ ಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ.
23.3.2020 ರಂದು ರಾಜ್ಯ ಸಕಾ೯ರವು ಹೊರಡಿಸಿದ್ದ ಆದೇಶದಂತೆ 30.3.2020 ರವರೆಗೆ ವೇತನ ಪಾವತಿಸಲು ಮತ್ತು ಲಾಕ್ಡೌನ್ ಕಾರಣ ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗಯ ಬಾರದೆಂದಿದೆ. ಅದನ್ನೂ ಹಲವು ಕಂಪನಿಗಳು ಪಾಲಿಸದಿರುವ ಮಾಚ್೯ ತಿಂಗಳ ಸಂಬಳವನ್ನೆ ಇದುವರೆಗೆ ನೀಡದಿರುವ ಹಲವು ಪ್ರಕರಣಗಳಿವೆ. ಇದೀಗ ಏಪ್ರಿಲ್ ತಿಂಗಳ ಸಂಬಳ ನೀಡದಿರಲು ಹಲವು ದಾರಿಗಳನ್ನು ಕಂಪನಿಗಳು/ ಮಾಲೀಕರು ಹುಡುಕುತ್ತಿದಾರೆ, ಸಬೂಬುಗಳನ್ನು ನೀಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಕಾಮಿ೯ಕ ಇಲಾಖೆ ಕಾಯ೯ದಶಿ೯ಗಳು 13.4.2020 ರಂದು ಆದೇಶ ಹೊರಡಿಸಿ ಲಾಕ್ಡೌನ್ ಕಾಲಾವಧಿಯ ವೇತನ ಉದ್ಯೋಗ ಸಂರಕ್ಷಣೆಗೆ ಆದೇಶಿಸಿದ್ದರು. ಆದರೆ ಸದರಿ ಆದೇಶವನ್ನು 15.4.2020 ರಂದು ಹಿಂಪಡೆದಿದ್ದಾರೆ. ರಾಜ್ಯ ಸಕಾ೯ರವು ಮಾಲೀಕರ ಲಾಭಿಗೆ ಮಣಿದು ಆದೇಶ ಹಿಂಪಡೆದಿರುವುದನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸಿದೆ.
ಮಾತಿನಲ್ಲಿ ವೇತನ ನೀಡಿ ಕೆಲಸದಿಂದ ತೆಗೆಯ ಬೇಡಿ ಎನ್ನುವ ಬಿಜೆಪಿ ಸಕಾ೯ರವು ಕೃತಿಯಲ್ಲಿ ಮಾಲೀಕರಿಗೆ ಅನುವುಗೊಳಿಸಿ ಕಾಮಿ೯ಕರನ್ನು ವಂಚಿಸುತ್ತಿದೆ ಎಂದು ಸಿಪಿಐ(ಎಂ) ರಾಜ್ಯ ಸಕಾ೯ರದ ಕ್ರಮವನ್ನು ಖಂಡಿಸಿದೆ. ಕೂಡಲೆ ಕಾಮಿ೯ಕರ ವೇತನ ಹಾಗು ಉದ್ಯೋಗ ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕೆಂದು ಸಿಪಿಎಂ ಬೆಂಗಳೂರು ದಕ್ಷಿಣಾ ಜಿಲ್ಲಾಸಮಿತಿಯ ಕಾರ್ಯದರ್ಶಿ ಕೆ,ಎನ್ ಉಮೇಶ್ ಆಗ್ರಹಿಸಿದ್ದಾರೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು