ಹುಬ್ಬಳ್ಳಿ: ಇಷ್ಟುದಿನ ಸುಮ್ಮನಿದ್ದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೊರಾಟ ವಿಚಾರ ಈಗ ಮತ್ತೆ ಶ್ರಾವಣ ಮಾಸದ ಇಷ್ಟಲಿಂಗಪೂಜೆ ಮಾಡುವ ಮೂಲಕ ಹೋರಾಟ ಶುರು ಮಾಡುವುದಾಗಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೆವೆ.ಇದೇ ತಿಂಗಳಿಂದ ಸರ್ಕಾರಕ್ಕೆ ಬಿಸಿ ಮುಟ್ಡಿಸುತ್ತೇವೆ ಪಂಚಮಸಾಲಿ ಸಮುದಾಯಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಪಂಚಮಸಾಲಿ ಪೀಠದ ಸ್ವಾಮಿಜಿ ಹೇಳಿದ್ದಾರೆ. 2 ಎ ಹಾಗೂ 2 ಡಿ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ.ಈ ಸರ್ಕಾರಕ್ಕೂ ನಾವು ಮನವಿ ಮಾಡಿದ್ದೇವೆ. ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಪರಿಶೀಲನೆ ಮಾಡುವುದಾಗಿ ಸಿಎಂ ಹೇಳಿದ್ದರು. ಮೀಸಲಾತಿ ವಿಚಾರದಲ್ಲಿ ಸಮುದಾಯದಲ್ಲಿ ನಿರಾಸೆ ಮೂಡಿದೆ. ಕೂಡಲೇ ತಜ್ಞರ ಸಭೆ ಕರೆದು ಮೀಸಲಾತಿ ವಿಚಾರ ಇತ್ಯರ್ಥ ಮಾಡಬೇಕು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಷ್ಠಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೆವೆ ಸಮುದಾಯದ ಜನತೆ ಮತ್ತೆ ಹೋರಾಟಕ್ಕೆ ಅಣಿಯಾಗಿದ್ದಾರೆ.ಮೀಸಲಾತಿ ವಿಚಾರದಲ್ಲಿ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ.ಮೀಸಲಾತಿ ವಿಚಾರದಲ್ಲಿ ನಮಗೆ ಇನ್ನೂ ಆದೇಶ ಪ್ರತಿ ಸಿಕ್ಕಿಲ್ಲ.ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದಲ್ಲಿ ಮತ್ತೆ ಹೋರಾಟ ನಡೆಸಲು ರೂಪುರೇಷೆ ಆರಂಭಿಸಿದ್ದೇವೆ..2ಎ ಮೀಸಲಾತಿ ಹೈಕೋರ್ಟ್‌ನಲ್ಲಿದೆ, 2ಡಿ ಸುಪ್ರೀಂಕೋರ್ಟ್ ನಲ್ಲಿದೆ.ಈ ಎಲ್ಲವನ್ನೂ ಬಗೆಹರಿಸುವ ಶಕ್ತಿ ಸರ್ಕಾರಕ್ಕಿದೆ. ಆದ್ದರಿಂದ ಸರ್ಕಾರ ಮನಸ್ಸು ಮಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು.
ಒಂದು ವೇಳೆ 2 ಎ ಮೀಸಲಾತಿ ನೀಡದ್ರೆ ಹೋದ್ರೂ, ಸೆಂಟ್ರಲ್ ಮತ್ರು ಸ್ಟೇಟ್ ಓಬಿಸಿಯಲ್ಲಿ ಲಿಂಗಾಯತ ಸಮುದಾಯವನ್ನ ಸೇರಿಸಿ. ಪಂಚಮಸಾಲಿ ಸಮುದಾಯದ ಶಕ್ತಿ ಈಗಾಗಲೇ ನಿಮಗೆ ತಿಳಿದಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಪಕ್ಷಕ್ಕೆ ಬೆಂಬಲ ನೀಡಿದೆ. ಆದ್ದರಿಂದ ಇದರ ಋಣವನ್ನ ತಿರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನಮ್ಮ ಸಮುದಾಯಕ್ಕೆ ಲೋಕಸಭಾ ಚುನಾವಣೆಯ ಮುನ್ನವೇ ಮೀಸಲಾತಿ ಘೋಷಣೆ ಮಾಡಿ ಎಂದು ಒತ್ತಡ ಹಾಕಿದ ಸ್ವಾಮೀಜಿ.
ಸಿದ್ದರಾಮನವರ ಸರ್ಕಾರದಲ್ಲಿ ಪಂಚಮಸಾಲಿ ಸಮುದಾಯದ 12 ಜನ ಶಾಸಕರಿದ್ದಾರೆ. 12 ರಲ್ಲಿ 5-6 ಜನರಿಗೆ ಸಚಿವ ಸ್ಥಾನ ನೀಡಬೇಕೆಂದು ನಾವು ಮನವಿ ಮಾಡಿದ್ದೇವು. ಆದ್ರೆ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ಶಿವಾನಂದ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿದೆ. ಮುಂದೆ ಆದ್ರೂ ಲಿಂಗಾಯತ ಪಂಚಮಸಾಲಿ ಹೋರಾಟದ ನೇತೃತ್ವದ ವಹಿಸಿದ ವಿನಯ್ ಕುಲಕರ್ಣಿಗೆ ಮತ್ತು ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹಾಕಿದ ಸ್ವಾಮೀಜಿ.
lokayuktha raid : ಸಂತೋಷ ಆನಿಶೆಟ್ಟರ್ ನಿವಾಸದ ಮೇಲೆ ಲೋಕಾಯುಕ್ತ ರೇಡ್…
ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?
ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?