ಹುಬ್ಬಳ್ಳಿ: ಧಾರವಾಡದ ಸಮರ್ಥನಂ ಸಂಸ್ಥೆಯು ಅಂಗವಿಕಲರಿಗಾಗಿ ಆ.೨೬ ರಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ ರವರೆಗೆ ಇಂದಿರಾ ಗಾಜಿನ ಮನೆ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಮರ್ಥನಂ ಸಂಸ್ಥೆ ಬಿಪಿಓ ಹರ್ಷಾ ಸರಾಫ್ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ ೨೫ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿದ್ದು, ೫೦೦ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದರು.
ಅಂಗವಿಕಲರಿಗೆ ಹಾಗೂ ಇತರೆ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಶಿಕ್ಷಣ ಪೂರೈಸಿದ ಆಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವ ಅಂಗವಿಕಲ ಅಭ್ಯರ್ಥಿಗಳು ಹಾಗೂ ಸ್ಟಾರ್ಟ್ ಅಪ್ ಪ್ರಾರಂಭಿಸಲು ಮೇಳದಲ್ಲಿ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಮೇಳದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ತಮ್ಮ ಬಯೋಡೆಟಾ, ಪಾಸ್ ಪೋರ್ಟ್ ಸೈಜ್ ಭಾವಚಿತ್ರಗಳನ್ನು, ವಿದ್ಯಾಹರ್ತೆಯ ಅಂಕಪಟ್ಟಿ, ಅಂಗವಿಕಲತೆಯ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ತರಬೇಕು. ಮಾಹಿತಿಗಾಗಿ 94808 35960, 94808 12123, 94808 12139 ಸಂಪರ್ಕಿಸಲು ಕೋರಿದರು.
ಸಮರ್ಥನಂ ಸಂಸ್ಥೆ ಟ್ರಸ್ಟಿ ಉದಯಕುಮಾರ ಬಾಬುನವರ, ಕೇಂದ್ರದ ಮುಖ್ಯಸ್ಥ ಕೃಷ್ಣಪ್ಪ ಲಮಾಣಿ, ಮಾನವ ಸಂಪನ್ಮೂಲ ಮುಖ್ಯಸ್ಥ ಶಿವಲಿಂಗಯ್ಯ ಚೌಕಿಮಠ ಇದ್ದರು.
Loan & Interest : ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ:




