ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಅಡ್ಡೆಗಳು ನಾಯಿಕೊಡೆಯಂತೆ ಎದ್ದಿದ್ದು ಅಕ್ರಮ ಮರಳು ದಂಧೆಕೋರರ ಹಾವಳಿ ಮಿತಿಮೀರಿದೆ ಹಾಗೂ ಭಾರೀ ಗಾತ್ರದ ವಾಹಗಳಿಂದ ರಸ್ತೆಗಳು ಹಾಳಾಗುತ್ತಿವೆ. ಈ ದಂಧೆಯ ಹಿಂದೆ ಅಧಿಕಾರಿಗಳು ಶಾಮೀಲಾಗಿರುವ ಆರೋಪವೂ ಕೇಳಿಬಂದಿದೆ.
ಹುಬ್ಬಳ್ಳಿ ನಗರಕ್ಕೆ ಗದಗ ಜಿಲ್ಲೆಗಳಿಂದ ಸಾಕಷ್ಟು ಮರಳು ಸಾಗಾಟವಾಗುತ್ತಿದ್ದು ಅಧಿಕಾರಿಗಳ ಶಾಮೀಲಿನಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಆದರೆ ಇದರ ಬಗ್ಗೆ ಯಾರು ಸಹ ಪ್ರಶ್ನೆ ಮಾಡುವಂತಿಲ್ಲ ಅನ್ನೋ ಹಾಗೆ ಮಾಬ್ ಕ್ರಿಯೇಟ್ ಮಾಡಿದ್ದಾರೆ ಮರಳು ದಂಧೆಕೋರರು..
ಹಳೆ ಹುಬ್ಬಳ್ಳಿ ವ್ಯಾಪ್ತಿಯ ರಸ್ತೆಗಳ ಸುತ್ತಮುತ್ತ ರಸ್ತೆಗಳಲ್ಲಿ ಮರಳು ತುಂಬಿದ ಲಾರಿಗಳು ಸಾಲು ಸಾಲು ಗಟ್ಟಿ ನಿಂತಿರುತ್ತವೆ. ಆದರೆ ಯಾವ ಲಾರಿ ಚಾಲಕರು 12 ಟನ್ ಇರುವ ಮರಳನ್ನು ತರುವುದಿಲ್ಲ; ಎಲ್ಲವೂ 20 ಟನ್ ಮೇಲೆ ಇರುತ್ತೆ. ಇದನ್ನು ಯಾವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಆರ್ ಟಿ ಓ ಅಧಿಕಾರಿಗಳು ಸ್ಥಳ ಪರಿಶಿಲನೆ ಮಾಡುತ್ತಿಲ್ಲ.
ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ನೀವು ನಮ್ಮ ಜೊತೆಗೆ ಬನ್ನಿ ಲಾರಿ ಹಿಡಿಯೋಣ ಎಂದು ಸಬೂಬು ಕೊಟ್ಟು ಸುಮ್ಮನಾಗಿದ್ದಾರೆ. ಹೆಚ್ಚಿನ ಲೋಡ್ ಮರಳು ಸಾಗಾಟ ಮಾಡುವ ಲಾರಿಗಳಿಂದ ಎಲ್ಲ ಪ್ರಮುಖ ರಸ್ತೆಗಳು ಹಾಳಾಗಿವೆ. ಇನ್ನು ಒಂದೇ ಪಾಸಿನಲ್ಲಿ ಮೂರುಮೂರು ಲಾರಿಗಳನ್ನ ದಾಟಿಸುತ್ತಿದ್ದಾರೆ ಅನ್ನೋ ಗಂಬೀರ ಆರೋಪಗಳು ಕೇಳಿಬಂದಿವೆ. .ಆದರೆ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಕ್ರಮ ಮರಳು ದಂಧೆ ಕೋರರ ಬೆನ್ನಿಗೆ ನಿಂತಿದೆ ಎಂಬ ಆರೋಪವೂ ಹುಬ್ಬಳ್ಳಿಯಲ್ಲಿ ಕೇಳಿ ಬರುತ್ತಿದೆ.
ಹುಬ್ಬಳ್ಳಿ ನಗರ ಸೇರಿದಂತೆ ನಗರದ ಹೊರವಲಯದಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಅಡ್ಡೆಗಳು ನಾಯಿಕೊಡೆಯಂತೆ ಎದ್ದಿದ್ದು, ಅವುಗಳ ಮೇಲೆಯೂ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.