Monday, July 22, 2024

Latest Posts

Dharawad: ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಆಚರಣೆ ಕುರಿತು ಸಭೆ..!

- Advertisement -

ಧಾರವಾಡ:  ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ಶಿವರಾಜ ತಂಗಡಗಿ ಅವರು ಇಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಆಚರಣೆ ಕುರಿತಂತೆ ಬೆಳಗಾವಿ ಕಂದಾಯ ವಿಭಾಗದ ಸಾಹಿತಿಗಳು ಮತ್ತು ಕಲಾವಿದರುಗಳ ಜೊತೆ ಸಮಾಲೋಚನಾ ಸಭೆಯನ್ನು ನಡೆಸಿದರು.

ಅದಕ್ಕೂ ಮುನ್ನ ಕರ್ನಾಟಕ ಸಂಘದ ಆವರಣದಲ್ಲಿದ್ದ ರಾ.ಹ .ದೇಶಪಾಂಡೆ ಹಾಗೂ ಡಾ.ಪಾಟೀಲ ಪುಟ್ಟಪ್ಪ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಬೆಲ್ಲದ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಪಿ ಹಿರೇಮಠ್ ಹಿರಿಯ ಸಾಹಿತಿ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಅವರು ಸೇರಿದಂತೆ ಅನೇಕ ಹಿರಿಯ ಸಾಹಿತಿ, ಕಲಾವಿದರು ಹಾಗೂ ಅಧಿಕಾರಿಗಳು ಹಾಜರಿದ್ದರು.

ಕರ್ನಾಟಕ ‌ವಿದ್ಯಾವರ್ಧಕ ಸಂಘಕ್ಕೆ ದೊಡ್ಡದಾದ ಗಡಿಯಾರವನ್ನು ಗೀಪ್ಟ್ ಕೊಟ್ಟರು.ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರು ಗಡಿಯಾರವನ್ನು ಸಚಿವರಿಂದ ಸ್ವೀಕರಿಸಿದ್ರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚಂದ್ರಕಾಂತ ಬೆಲ್ಲದ ಅವರು,ಸಚಿವರು ವಿದ್ಯಾವರ್ಧಕ ಸಂಘಕ್ಕೆ ಬಂದು ಭೇಟಿ ಕೊಟ್ಟಿದ್ದುಸಂತೋಷವಾಗಿದೆ.ಇದನ್ನು ಸಚಿವರು ವ್ಯಯಕ್ತಿಕವಾಗಿ ಕೊಟ್ಟಿದ್ದಾರೋ? ಅಥವಾ ಸರ್ಕಾರದಿಂದ ಕೊಟ್ಟಿದ್ದಾರೋ? ಗೊತ್ತಿಲ್ಲ ಎಂದರು.

Shivaraj tangadagi ; ಸಿಟಿ ರವಿ ಮಾತಿಗೆ ತಂಗಡಗಿ ವಾಗ್ದಾಳಿ..!

 

- Advertisement -

Latest Posts

Don't Miss