Friday, April 18, 2025

Latest Posts

World Cup: ಏಕದಿನ ವಿಶ್ವಕಪ್​ಗೆ ತಂಡ ಪ್ರಕಟ. ರಾಹುಲ್​​ ಎಂಟ್ರಿ, ತಿಲಕ್​ಗೆ ಗೇಟ್​ಪಾಸ್

- Advertisement -

ಕ್ರೀಡಾ ಸುದ್ದಿ: ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ಬಲಿಷ್ಠ ತಂಡ ಪ್ರಕಟಿಸಿದೆ. ಇಂದು ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್​ರವ್ರು, ರೋಹಿತ್‌ ಶರ್ಮಾ ನಾಯಕತ್ವದ 15 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ.

ಐವರು ಪರಿಣಿತ ಬ್ಯಾಟ್ಸ್​ಮನ್​ಗಳು, ಇಬ್ಬರು ಕೀಪರ್ಸ್, ಮೂವರು ಆಲ್​ರೌಂಡರ್ಸ್, ಮೂವರು ವೇಗಿಗಳು, ಓರ್ವ ಸ್ಪಿನ್ನರ್​ನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ, ಶುಬ್​ಮನ್​ ಗಿಲ್​​ ಓಪನರ್ಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಕಪ್ ಓಪನರ್​ ಹಾಗೂ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ.

ತಂಡದಲ್ಲಿರೋ ಏಕೈಕ ಕನ್ನಡಿಗ ಅಂದ್ರೆ ಕೆ.ಎಲ್ ರಾಹುಲ್ ಮಾತ್ರ.  ಇನ್ನು ಏಷ್ಯಾಕಪ್​​ನಲ್ಲಿ ಸ್ಥಾನ ಪಡೆದಿರೋ ತಿಲಕ್​​ ವರ್ಮಾ, ಸ್ಟ್ಯಾಂಡ್ ಬೈ ಆಟಗಾರ ಸಂಜು ಸ್ಯಾಮ್ಸನ್ ಹಾಗೂ ಯಜ್ವೇಂದ್ರ ಚಹಾಲ್​ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ವಿಶ್ವಕಪ್​ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ) ಶುಬ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಇಶಾನ್ ಕಿಶನ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ) ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಪಟೇಲ್, ಜಸ್​ಪ್ರೀತ್ ಬುಮ್ರಾ, ಮೊಹಮದ್​ ಶಮಿ, ಮೊಹಮದ್​ ಸಿರಾಜ್, ಕುಲ್ದೀಪ್ ಯಾದವ್.

ಕ್ರಿಕೇಟ್ ಲೋಕ ತ್ಯಜಿಸಿದರೂ ಧೋನಿ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.. ಹೇಗೆ ಗೊತ್ತಾ..?

Cricket : ಶತಕ ಭಾರಿಸಿಲ್ಲ ಆದರೂ ಗೆಲುವಿನ ಜೊತೆ ಹೊಸ ದಾಖಲೆ..?!

Cricket : 17 ವರ್ಷದ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ ಕ್ರಿಕೆಟಿಗ…!

 

- Advertisement -

Latest Posts

Don't Miss