
ಕರ್ನಾಟಕ ಟಿವಿ ಮಂಡ್ಯ : ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಹಳ್ಳಿಗಳಲ್ಲಿ ಜನರು ಹೈ ಅಲರ್ಟ್ ಆಗಿದ್ದಾರೆ. ರಸ್ತೆಗಳಿಗೆ ಮಣ್ಣಿನ ದಿಬ್ಬಗಳ ಹಾಕಿಕೊಂಡು ತಮ್ಮ ತಮ್ಮ ಗ್ರಾಮಕ್ಕೆ ಯಾರು ಬಾರದಂತೆ ನಿರ್ಬಂಧ ಹೇರಿಕೊಂಡಿದ್ದಾರೆ. ಮಳವಳ್ಳಿಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊನ್ನನಾಯಕನ ಹಳ್ಳಿ ಗ್ರಾಮದ ಜನ ತಮ್ಮ ಗ್ರಾಮದಿಂದ ಯಾರು ಹೋಗಬಾರದು ಹಾಗೂ ಹೊರಗಡೆಯಿಂದ ಯಾರು ಬಾರದಂತೆ ನಿರ್ಬಂಧ ಹಾಕಿಕೊಂಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತದ ಜೊತೆ ಕೈ ಜೋಡಿಸಿ ತಮ್ಮ ಗ್ರಾಮದ ಜನರನ್ನ ಕೊರೋನಾದಿಂದ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.. ಆದ್ರೆ, ತುರ್ತು ಸಂರ್ಭದಲ್ಲಿಆ್ಯಂಬುಲೆನ್ಸ್ ಸೇರಿದಂತೆ ವಾಹನ ಓಡಾಟಕ್ಕೆ ಆಗೋದಿಲ್ವಾ ಅನ್ನುವ ಪ್ರಶ್ನೆಗೆ ಕೆಲವೇ ನಿಮಿಷಗಳಲ್ಲಿ ತದನ್ನ ತೆರವು ಮಾಡಿಕೊಡ್ತೇವೆ ಅಂತಾರೆ ಗ್ರಾಮಸ್ಥರು.. ಹಳ್ಳಿ ಜನರೇ ಇಷ್ಟೊಂದು ಹೈ ಅಲರ್ಟ್ ಆಗಿರುವಾಗ ನಮ್ಮ ನಗರ ಪ್ರದೇಶದ ಜನ ಯಾಕೆ ಲಾಕ್ ಡೌನ್ ಪಾಲನೆ ಮಾಡ್ತಿಲ್ಲ ಅನ್ನುವ ಪ್ರಶ್ನೆ ಕಾಡೋದು ಸಹಜ.
ಪ್ರವೀಣ್ ಕುಮಾರ್ ಜಿಟಿ. ಕರ್ನಾಟಕ ಟಿವಿ, ಮಂಡ್ಯ