ಮಂಡ್ಯ : ಸೋಂಕಿತರನ್ನ ವಸತಿ ಪ್ರದೇಶದಲ್ಲಿ ಇರಿಸಲು ವಿರೋಧ ಓಕೆ. ಆದ್ರೆ, ಸಮೂಹಿಕ ಪರೀಕ್ಷೆಗೆ ವಿರೋಧ ಯಾಕೆ..? ರಾಜ್ಯ ಸರ್ಕಾರದ ಆದೇಶದ ಮೇಲೆ ಇಡೀ ರಾಜ್ಯಾದ್ಯಂತ ಪತ್ರಕರ್ತರಿಗೆ ಕೋವಿಡ್ ಪರೀಕ್ಷೆ ಮಾಡಲಾಗ್ತಿದೆ.. ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಪರೀಕ್ಷೆ ನಡೆಸಲಾಗುತ್ತಿದ್ದು ಜೆಡಿಎಸ್ ಎಂಎಲ್ ಸಿ ಶ್ರೀಕಂಠೇಗೌಡ ಪರೀಕ್ಷೆಗೆ ವಿರೋಧ ಮಾಡಿದ್ದಾರೆ. ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಟೆಸ್ಟ್ ಮಾಡೋದಕ್ಕೆ ಶ್ರೀಕಂಠೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.. ಸ್ಥಳಿಯ ಜರನ್ನ ಕಟ್ಟಿಕೊಂಡು ಪತ್ರಕರ್ತರ ಟೆಸ್ಟ್ ಗೆ ವಿರೋದ ಮಾಡುವ ವೇಳೆ ಎಂಎಲ್ ಸಿ ಪುತ್ರ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ. ಈ ಸಂಬಂಧ ಶಾಸಕರ ಪುತ್ರನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಸರ್ಕಾರದ ಆದೇಶದ ಮೇಲೆ ನಾವು ಪರೀಕ್ಷೆ ಮಾಡುತ್ತಿದ್ದು ಯಾರೂ ಅಡ್ಡಿ ಮಾಡಬಾರದು. ಈ ಘಟನೆ ನಡೆಯಬಾರದಿತ್ತು ಅಂತ ಮಂಡ್ಯ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಹಾಗೂ ಎಸ್ಪಿ ಹೇಳಿದ್ದಾರೆ..
ಅಂಬೇಡ್ಕರ್ ಭವನದ ಆವರಣ ಒಂದೂವರೆ ಎಕರೆಗಿಂತ ವಿಸ್ತೀರ್ಣವಾಗಿದೆ.. ಹೀಗಾಗಿ ಆ ಸ್ಥಳವನ್ನ ಜಿಲ್ಲಾಡಳಿತ ಆಯ್ಕೆ ಮಾಡಿಕೊಂಡಿ್ದೆ. ಅದೇ ಏರಿಯಾದಲ್ಲಿ ಶ್ರೀಕಂಠೇಗೌಡರ ಮನೆ ಇದೆ ಈ ಕಾರಣಕ್ಕೆ ಜನರನ್ನ ಎತ್ತಿಕಟ್ಟಿ ಪ್ರತಿಭಟನೆ ಮಾಡಿದ್ದಾರೆ ಎನ್ನಲಾಗ್ತಿದೆ..

ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ