Drought: ನಮ್ಮ ಪತ್ರಕ್ಕೆ ಪ್ರಧಾನಿ ಉತ್ತರ ಕೊಡದಿದ್ದರೆ ಬರಗಾಲ ಘೋಷಣೆ: ಸಿಎಂ

ಹುಬ್ಬಳ್ಳಿ: ಜಿಲ್ಲೆಗೆ ಭೇಟಿ ನೀಡಿದ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಜಿ20 ಸಭೆಗೆ ಖರ್ಗೆಯವರನ್ನು ಆಹ್ವಾನ ಮಾಡದಿರುವ ವಿಚಾರವಾಗಿ ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ  ಜೊತೆಗೆ ಜೆಡಿಎಸ್ ಪಕ್ಷ ಮೈತ್ರಿ ಮಾಡುಕೊಳ್ಳುತ್ತಿರುವ ಬಗ್ಗೆ ಸಿಎಂ ಅವರಿಗೆ ಕೇಳಿದಾಗ  ಜಾತ್ಯಾತೀತ ಅಂತ ಹೆಸರಿಟ್ಟುಕೊಂಡವರು ಈಗ  ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ದೇವೇಗೌಡರು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ‌ ಎಂದಿದ್ದರು ಆದ್ರೆ ಇದೀಗ ಬಿಜೆಪಿವರ ಜೊತೆ ಸೇರಿ‌ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಯಾದರೂ ಜೆಡಿಎಸ್ ನವರು ಸೇರಿಕೊಳ್ಳುತ್ತಾರೆ.

ಇನ್ನು ಕೆಲವು ದಿನಗಳ ಹಿಂದೆ ನಡೆದಿರುವ 20 ಸಭೆಗೆ ವಿಪಕ್ಷನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಆಹ್ವಾನ ಮಾಡದಿರುವ ವಿಚಾರವಾಗಿ, ಅವರು ವಿಪಕ್ಷ ನಾಯಕರು ಅವರನ್ನ ಆಹ್ವಾನ‌ ಮಾಡದಿರುವುದು ತಪ್ಪು ಎಂದರು.

ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ಹಿನ್ನೆಲೆ: ನಾನು ಜಿ20 ಸಭೆಯ ಸದಸ್ಯನಲ್ಲ.ನನ್ನನ್ನು ಸಭೆಗೆ ಕರೆದಿಲ್ಲ ಊಟಕ್ಕೆ ಕರೆದಿರೋದು ಹೀಗಾಗಿ ನಾನು ಹೋಗಲ್ಲ ಅಶ್ವಥ್ ನಾರಾಯಣಗೆ ಏನು ಗೊತ್ತಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಅರಣ್ಯ ಮತ್ತು ಎನ್ವಿರಾನಮೆಂಟ್  ಕ್ಲಿಯರೆನ್ಸ್ ಕಳಿಸಿಲ್ಲ, ಮೊದಲು ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಕಳಿಸಲಿ ನಾವು ಪ್ರಧಾನಿಯವರಿಗೆ ಸಮಯ ಕೇಳಿದ್ದೇವೆ ಮಹದಾಯಿ, ಕೃಷ್ಣಾ ,‌ಕಾವೇರಿ‌ ಸೇರಿದಂತೆ ಹಲವು ವಿಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ ನಿಯೋಗದೊಂದಿಗೆ ಬರುತ್ತೇವೆ ಅಂತಾ ಪ್ರಧಾನಿಗಳಿಗೆ ಪತ್ರ ಬರೆದಿದ್ದೇವೆ ಆದ್ರೆ ಈವರೆಗೂ ಅವರಿಂದ ಉತ್ತರ ಬಂದಿಲ್ಲ.ಬರಗಾಲ ಘೋಷಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

BBMP: ಗಣೇಶ ಹಬ್ಬ ಆಚರಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು..!

 

Shivaji Circle: ಹುಲಸೂರು ತಾಲೂಕಿನ ಶಿವಾಜಿ ವೃತ್ತದಲ್ಲಿ ಭೀಕರ ಘಟನೆ..!

Empty lake: ರೈತರ ಬೆಳೆ ಜೊತೆ ನೀರಾವರಿ ಅಧಿಕಾರಿಗಳ ಚೆಲ್ಲಾಟ

About The Author