Hubballi News : ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು.
ನನಗೆ ಇದರ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಮೈತ್ರಿ ಅನಿವಾರ್ಯ ಅಂತ ಬೊಮ್ಮಯಿ ಅವರು ಸ್ಥಳೀಯವಾಗಿ ಹೇಳಿರಬಹುದು. ನಾನು ಕೇಂದ್ರದಲ್ಲಿ ಮಂತ್ರಿಯಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ನಾನು ಕಾಮೆಂಟ್ ಮಾಡೋದ್ದಿಲ್ಲ ಎಂದು ಹೇಳಿದರು.
ಶೃಂಗ ಸಭೆ ಬಗ್ಗೆ ಮಾತನಾಡಿ G-20 ಭಾರತದ 75 ವರ್ಷದ ಇತಿಹಾಸದಲ್ಲಿ ಬಾರಿ ದೊಡ್ಡ ಮೈಲುಗಲ್ಲು, ಮುಖ್ಯವಾಗಿ ಭಿನ್ನಾಭಿಪ್ರಾಯ ಬರದಂತೆ ಡಿಕ್ಲರೇಷನ್ ಮಾಡಿದ್ದೆ ಬಹು ದೊಡ್ಡ ಸಾಧನೆ, ಭಾರತ ನೇತೃತ್ವವನ್ನು ವಿದೇಶಗಳು ಒಪ್ಪುತ್ತಿವೆ ಇದು ಸ್ಪಷ್ಟ ಸಂಕೇತ , ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತದ ಪ್ರಪೋಸಲ್ ಬಂದಾಗ ಇದನ್ನು ಸ್ವೀಕಾರ ಮಾಡಿದ್ದಾರೆ ಮಧ್ಯ ಪ್ರಾಚ್ಯ ಹೊಸ ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿವೆ. ಎಲ್ಲಾ ರಾಷ್ಟ್ರದ ಪ್ರಮುಖರು, ಚೀನಾ ಮತ್ತು ರಷ್ಯಾದ ಫಾರೆನ್ ಮಿನಿಸ್ಟರ್ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಭಾರತ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿದ್ದಾರೆ.
ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ, ಆದ್ರೆ ಕಾಂಗ್ರೆಸ್ ಪಕ್ಷಕ್ಕೆ, ನಾಯಕರಿಗೆ ದಾರಿದ್ರ್ಯತೆ ಬಂದಿದೆ. ರಾಹುಲ್ ಗಾಂಧಿ, ಜಯರಾಮ್ ರಮೇಶ್ ಅವರಿ ಎಂತಹ ಧರಿದ್ರತೆ ಬಂದಿದೆ ಅಂದ್ರೆ ಮಳೆ ನೀರು ನಿಂತಿರೋದನ್ನ ಟ್ವಿಟ್ ಮಾಡ್ತಾರೆ, ಇಡೀ ಜಗತ್ತು ಭಾರತವನ್ನು ಹೋಗೋಳುತ್ತಿದೆ, ಆದರೆ ಕಾಂಗ್ರೆಸ್ ಮಾತ್ರ ತೆಗಳುತ್ತಿದೆ. ಇದು ಮಾನಸಿಕ ರೋಗ ದೇಶಕ್ಕೆ ಒಳ್ಳೆಯದಾದ್ರೆ ಅದನ್ನು ಸಹಿಸೋಕೆ ಆಗದ ಸ್ಥಿತಿಗೆ ಕಾಂಗ್ರೆಸ್ ನವರು ಬಂದು ತಲುಪಿದ್ದಾರೆ. ಮೋದಿ ವಿರೋಧ ಮಾಡುವ ಭರದಲ್ಲಿ ದೇಶವನ್ನೇ ವಿರೋಧ ಮಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್ ಜೋಶಿ ಹರಿಹಾಯ್ದರು.
Jagadish Shettar : ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಗೇಮ್ ಪ್ಲ್ಯಾನ್: ಲಿಂಗಾಯತ ನಾಯಕರೇ ಟಾರ್ಗೆಟ್..!
Laxmi Hebbalkar: ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಸ್ವಾಗತಿಸುತ್ತೇವೆ..!