- Advertisement -
ಕರ್ನಾಟಕ ಟಿವಿ : ಅರಬ್ ದೇಶಗಳಿಂದ ಭಾರತೀಯರನ್ನ ಕರೆತರುವ ಕೆಲಸ ಶೀಘ್ರವೇ ಶುರುವಾಗಲಿದೆ. ಈ ನಡುವೆ ಅತಿ ಹೆಚ್ಚು ಸೋಂಕಿಗೆ ಗುರಿಯಾಗಿರುವ ಅಮೆರಿಕಾದಿಂದಲೂ ಭಾರತೀಯ ಮೂಲದ ವಿದ್ಯಾರ್ಥಿಗಳು, ಪ್ರವಾಸಿಗರನ್ನ ಕರೆತರಲು ಭಾರತ ಸರ್ಕಾರ ಮುಂದಾಗಿದೆ. ಅಮೆರಿಕಾದಿಂದಲೂ ಭಾರತೀಯರನ್ನ ಕರೆತರುವ ಕೊಲ ನಡೆಯಲಿದೆ. ಸ್ಯಾನ್ ಫ್ರಾನ್ಸಿಸ್ಕೋ, ನ್ಯೂ ಯಾರ್ಕ್, ಚಿಕಾಗೋ, ವಾಶಿಂಗ್ಟನ್ ನಿಂದ ಭಾರತದ ವಿಮಾನಗಳು ಕರೆತರಲಿವೆ.. ಗುರುವಾರದಿಂದ ದೊಡ್ಡ ಮಟ್ಟದ ಕಾರ್ಯಾಚರಣೆ ಶುರುವಾಗಲಿದ್ದುಅಮೆರಿಕಾ,ಅರಬ್ ದೇಶಗಳು ಸೇರಿದಂತೆ 13 ರಾಷ್ಟ್ರಗಳಿಂದ 64 ವಿಮಾನಗಳಲ್ಲಿ 14800 ಜನರನ್ನ ಮೊದಲ ಹಂತದಲ್ಲಿ ಭಾರತಕ್ಕೆ ಕರೆತರಲಿದ್ದಾರೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ
- Advertisement -