ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಮುಂದುವರೆದಿದೆ. ಮಹಾನಗರ ಪಾಲಿಕೆಯ ಆವರಣದಲ್ಲಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಆಗಮಿಸಿ ಮತ್ತಷ್ಟು ಬಲ ತುಂಬುವ ಕೆಲಸ ಮಾಡಿದ್ದಾರೆ.
ಹೌದು..ಮಹಾನಗರ ಪಾಲಿಕೆಯ ಸದಸ್ಯರೊಂದಿಗೆ ಮಾಡುತ್ತಿರುವ ಅಹೋರಾತ್ರಿ ಧರಣಿಗೆ ಮಹೇಶ ಟೆಂಗಿನಕಾಯಿ ಸಾಥ್ ನೀಡಿದ್ದು, ಇಂದು ಮತ್ತಷ್ಟು ಕಾವು ಪಡೆದುಕೊಳ್ಳಲಿದೆ. ಇನ್ನೂ ಇತ್ತ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿರೋಧಿಸಿ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆಯಾಗಲಿದ್ದು, ಧಾರವಾಡ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರೊಂದಿಗೆ ಹಕ್ಕು ಚ್ಯುತಿ ಪ್ರಶ್ನೆ ಮಾಡಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲಗುಂಟ್ಲಾ ಅವರಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದು, ಈ ಒಂದು ಅರ್ಜಿ ಕೂಡಾ ಇಂದು ವಿಚಾರಣೆಯಾಗಲಿದೆ.
Edga Ground : ಅನುಮತಿ ಕೊಡದಿದ್ದರೂ ಈದ್ಗಾದಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡ್ತೀವಿ : ಶಾಸಕ ಬೆಲ್ಲದ ಎಚ್ಚರಿಕೆ..!
Corporation : ಹುಬ್ಬಳ್ಳಿ : ಪಾಲಿಕೆ ಆಯುಕ್ತರ ಕಛೇರಿಗೆ ಪ್ರತಿಭಟನಾಕಾರರಿಂದ ಮುತ್ತಿಗೆ
Award : ಶಾಲಿನಿ ಸುಧಾ ಸಿಂಧೆಗೆ, ರೋಟರಿ ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ