Corporation : ಹುಬ್ಬಳ್ಳಿ : ಪಾಲಿಕೆ ಆಯುಕ್ತರ ಕಛೇರಿಗೆ ಪ್ರತಿಭಟನಾಕಾರರಿಂದ ಮುತ್ತಿಗೆ

Hubballi News : ಅದು ಐತಿಹಾಸಿಕ ಮೈದಾನ.‌ಆ‌ ಮೈದಾನದಲ್ಲಿ ಇದೀಗ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ನಡೆಯುತ್ತಿರೋ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.‌

ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳ ಬಾಕಿ‌ ಇರೋ ಹಿನ್ನೆಲೆ ಒಂದೆಡೆ ಕೆಲ‌ ಸಂಘಟನೆಗಳಿಂದ ವಿರೋಧ ವ್ಯಕ್ತವಾದ್ರೆ, ಹಿಂದೂ‌ ಸಂಘಟನೆಗಳಿಂದ‌ ಮೈದಾನದಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ‌ ಅನ್ನೋ ಹಠ ಹೆಚ್ಚಾಗಿದೆ.

ಇದೇ ಕಾರಣಕ್ಕೆ ಪಾಲಿಕೆ ಆಯುಕ್ತರ ಕಛೇರಿ ಎದುರು ಆಹೋ ರಾತ್ರಿ ಧರಣಿ ನಡೆಸಲಾಗುತ್ತಿದೆ. ಈ ಹಿನ್ನೆಲೆ ಬೀಗ ಹಾಕಿದ ಆಯುಕ್ತರ ಕಚೇರಿಗೆ ಪ್ರತಿಭಟನಾಕಾರರಿಂದ ಮುತ್ತಿಗೆ ಹಾಕಲಾಗಿದೆ. ಕಾರ್ಯಕರ್ತರು ಬೀಗ ಒಡೆಯಲು ಮುಂದಾಗಿದ್ದಾರೆ. ಪಾಲಿಕೆ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿ ಅಧಿಕಾರಿಗಳ ನಡೆಗೆ ಘೋಷಣೆ ಹಾಕಿ, ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಜೊತೆಗೆ ಬೀಗ ತೆಗೆದ ತಕ್ಷಣ ಪಾಲಿಕೆ ಕಛೇರಿ ಒಳಗಡೆ ಕಾರ್ಯಕರ್ತರು ಭಜನೆ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಕಚೇರಿಯ ಸಿಬ್ಬಂದಿ ಬೀಗ ತೆಗೆದಿದ್ದಾರೆ. ವಾಗ್ವಾದದ ನಡುವೆ ಪೊಲೀಸರು ಪ್ರವೇಶ ಮಾಡಿದ್ದಾರೆ.

Award : ಶಾಲಿನಿ ಸುಧಾ ಸಿಂಧೆಗೆ, ರೋಟರಿ ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ

Sports : ಕ್ರೀಡೆಯಲ್ಲಿ ಯಶಸ್ಸು ಪಡೆದು ದೇಶಕ್ಕೆ ಪ್ರತಿಭೆ ಪಸರಿಸುವ ಕಾರ್ಯ ಕೈಗೊಳ್ಳಬೇಕು : ಶಾಸಕ ಟಿ ರಘುಮೂರ್ತಿ

Nipah Virus : ಕಾಸರಗೋಡು : ನಿಫಾಗೆ ವಿಶೇಷ ನಿಗಾ ವಹಿಸಿದ ಆರೋಗ್ಯ ಇಲಾಖೆ

 

About The Author