Thursday, December 4, 2025

Latest Posts

Ganesh Fest : ಹುಬ್ಬಳ್ಳಿಯಲ್ಲಿ ಸಿದ್ಧವಾದ 12 ಲಕ್ಷ ಮೌಲ್ಯದ ಅಮೇರಿಕನ್ ಡೈಮಂಡ್ ಗಣಪತಿ: ಬೆಂಗಳೂರಿಗೆ ರವಾನೆ

- Advertisement -

Hubballi News : ವಾಣಿಜ್ಯನಗರಿ ಹುಬ್ಬಳ್ಳಿಯ ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ 12 ಲಕ್ಷ ರೂ.ಗಳ ಮೌಲ್ಯದ ಅಮೇರಿಕನ್ ಡೈಮಂಡ ಹರಳುಗಳಿಂದ ನಿರ್ಮಿಸಿದ ಗಣಪತಿ ಮೂರ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ.

ಹೌದು.. ಬಮ್ಮಾಪುರ ನಿವಾಸಿ ಮೂರ್ತಿ ಕಲಾವಿದ ಮಹೇಶ ಮುರಗೋಡ ಹಾಗೂ ಅವರ ತಂಡದವರು ನಿರ್ಮಿಸಿರುವ ಗಣೇಶ ಮೂರ್ತಿಯು ಬೆಂಗಳೂರ ರಾಜಾಜಿನಗರ 2ನೇ ಹಂತ ಮಿಲ್ಕ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘದಿಂದ ಸೆ.18 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ 5.7 ಅಡಿ ಎತ್ತರವಿದ್ದು, ಸುಮಾರು 150 ಕೆಜಿ ತೂಕ ಹೊಂದಿದೆ. ಮುಖವೊಂದನ್ನು ಬಿಟ್ಟು ಇನ್ನುಳಿದ ಎಲ್ಲ ಭಾಗವೂ ಸಹ ಅಮೇರಿಕನ್ ಡೈಮಂಡ್ ಹರಳು, ನವರತ್ನ ಹರಳುಗಳಿಂದ ಗಣೇಶ ಮೂರ್ತಿಯನ್ನು ನಿರ್ಮಿಸಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಸ್ವಸ್ತಿಕ ಯುವಕರ ಸಂಘ ಅಮೇರಿಕನ್ ಡೈಮಂಡ್ ಹರಳುಗಳಿಂದ ಅಲಕೃಂತ ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಿಕೊಂಡು ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಾಪನೆ ಮಾಡಿ 7 ದಿನಗಳವರೆಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷವೂ ಸಹ ಸುಮಾರು 60 ಸಾವಿರ ಅಮೇರಿಕನ್ ಡೈಮಂಡ ಹಾಗೂ ನವರತ್ನ ಹರಳುಗಳಿಂದ ಐಶ್ವರ್ಯ ಗಣೇಶ ಮಾದರಿಯಲ್ಲಿ ಗಣೇಶ ಮೂರ್ತಿ ನಿರ್ಮಿಸಿ ಪ್ರತಿಷ್ಠಾಪನೆಗೆ ಮುಂದಾಗಿದ್ದು, ಶುಕ್ರವಾರ ನಗರದಿಂದ ರೈಲಿನ ಮೂಲಕ ತೆಗೆದುಕೊಂಡು ಹೋಗಲಾಯಿತು.

Edga Ground : ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಬಿಗಿ ಬಂದೋಬಸ್ತ್

Siddaramaiah : ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

Edga Ground : ಗಣೇಶ ಪ್ರತಿಷ್ಠಾಪನೆಗೆ ಅನುಮತಿಗೆ ಆಯುಕ್ತರ ವಿಳಂಬ : ಬೀದಿಗಿಳಿದ ಪ್ರತಿಭಟನಾಕಾರರು

- Advertisement -

Latest Posts

Don't Miss