Mysore News : ಮಗನ ಶೋಕಿಗೆ ಕುಮ್ಮಕ್ಕು ಕೊಟ್ಟ ಪಿಎಸ್ ಐ ಗೆ ಇದೀ ಗ ಎತ್ತಂಗಡಿ ಶಿಕ್ಷೆಯಾಗಿದೆ. ಇದೊಂದು ಮೈಸೂರಿನಲ್ಲಿ ನಡೆದ ಘಟನೆ ಯಾಗಿದ್ದು ಮಗನ ವ್ಹೀಲಿಂಗ್ ಶೋಕಿಗೆ ಒಬ್ಬ ಬಡ ರೈತ ಬಲಿಯಾದ ಘಟನೆ ನಡೆದಿದೆ. ಇನ್ನು ಮಗನಿಗೆ ತಾಯಿ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆದೇಶಿಸಿ ಇಲಾಖೆ ಪಿಎಸ್ ಐ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಇತ್ತೀಚೆಗೆ ವ್ಹೀಲಿಂಗ್ ಪುಂಡಾಟಿಕೆಗೆ ಬಡ ರೈತನೋರ್ವ ಬಲಿಯಾಗಿದ್ದ. ವ್ಹೀಲಿಂಗ್ ಮಾಡಿದ ಯುವಕನಿಗೂ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆ ಸೇರಿದ್ದನು. ಹಿರಿ ಜೀವ ವನ್ನು ಕಳೆದುಕೊಂಡ ಕುಟುಂಬ ಆರೋಪಿ ಬಂಧನಕ್ಕೆ ಆಗ್ರಹಿಸಿತ್ತು ಕೂಡಾ . ಇನ್ನು ತನಿಖೆ ವೇಳೆ ಆತ ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಆಗಿದ್ದ ಯಾಸ್ಮಿನ್ ತಾಜ್ ಅವರ ಮಗ ಸೈಯದ್ ಐಮಾನ್ ಎಂಬುವುದಾಗಿ ತಿಳಿದು ಬಂದಿದೆ. ಈ ಕಾರಣದಿಂದಲೇ ಪಿಎಸ್ ಐ ಅವರನ್ನು ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ. ವ್ಹೀಲಿಂಗ್ ಮಾಡುವ ವೇಳೆ 68 ವರ್ಷದ ಗುರುಸ್ವಾಮಿ ಎಂಬ ಹಿರಿಯರಿಗೆ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣವಾಗಿದ್ದ.
ವರ್ಗಾವಣೆ ಆದೇಶ ಬೆನ್ನಲ್ಲೇ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪಿಎಸ್‌ಐ, ವಾಟಾಪ್ಸ್ ಸ್ಟೇಟಸ್ ಹಾಕಿ ಪರೋಕ್ಷವಾಗಿ ಇಲಾಖೆಯ ಆದೇಶದ ವಿರುದ್ಧ ಸಾರ್ವಜನಿಕರವಾಗಿ ಕಿಡಿಕಾರಿದ್ದಾರೆ. ‘ಇದು ನನ್ನ ಸುಂದರ ಇಲಾಖೆಯಿಂದ ನಾನು ಪಡೆದದ್ದು ಹ್ಯಾಟ್ಸ್ ಆಫ್’ ಎಂದು ಐಪಿಎಸ್ ಅಧಿಕಾರಿ ಬರೆದುಕೊಂಡಿದ್ದಾರೆ.
ಇನ್ನು ವ್ಹೀಲಿಂಗ್ ಅಷ್ಟೇ ಅಲ್ಲದೆ ಸಯ್ಯದ್ ಮೇಲೆ ಕಳ್ಳತನದ ಆರೋಪ ಕೂಡಾ ಕೇಳಿ ಬರುತ್ತಿದೆ.
Laxmi Hebbalkar : ಕಡು-ಬಡವರಿಗಾಗಿ ನಿರ್ಮಿಸಿದ ಮನೆಗಳ ಕೀ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Eshwar Khandre : ಜಿಲ್ಲಾ, ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಈಶ್ವರ್ ಖಂಡ್ರೆ
Farmers: ಒನ್ಟೈಮ್ ಸೆಟಲ್ಮೆಂಟ್ಗೆ ಸ್ಪಂದಿಸದ ಆರೋಪ! ಬ್ಯಾಂಕ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತರು..!