ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಸಮಸ್ಯೆಗೆ ಸಿಲುಕಿರುವ ಕಾರ್ಮಿಕರು, ರೈತರು ಹಾಗೂ ಸಣ್ಣ ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಒಂದಷ್ಟು ಆರ್ಥಿಕ ಬಲವನ್ನ ತುಂಬಿದೆ.. ಹೂವು ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ ಅನ್ವಯವಾಗುವಂತೆ 25 ಸಾವಿರ ಪರಿಹಾರ.. ಕ್ಷೌರಿಕ ಹಾಗೂ ಅಗಸ ವೃತ್ತಿ ಮಾಡುವ 2,90,000 ಜನರಿಗೆ ತಲಾ 5000 ಸಹಾಯ ಧನ ಘೋಷಣೆ ಮಾಡಿದ್ದಾರೆ.

7,75,000 ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ, ಇನ್ನು 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 3 ಸಾವಿರ ಸಹಾಯಧನ ನೀಡ್ತೇವೆ, ಈಗಾಗಲೇ ಕಟ್ಟಡ ಕಾರ್ಮಿಕರಿಗೆ ತಲಾ ಎರಡು ಸಾವಿರ ಘೋಷಣೆ ಮಾಡಲಾಗಿದೆ.

ಅದಲ್ಲದೇ ಹೊಸದಾಗಿ 3 ಸಾವಿರ ಸಹಾಯ ಧನವನ್ನ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.. ಇದಲ್ಲದೇ ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳ ವಿದ್ಯುತ್ ಬಿಲ್ ನ ಫಿಕ್ಸಡ್ ಚಾರ್ಜ್ ಅನ್ನು 2 ತಿಂಗಳ ಅವಧಿಗೆ ಮನ್ನಾ ಮಾಡೋದಾಗಿ ತಿಳಿಸಿದ್ರು.. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ನ ಫಿಕ್ಸಡ್ ಚಾರ್ಜ್ ಕಟ್ಟೋದನ್ನ ಎರಡು ತಿಂಗಳ ಅವಧಿಗೆ ಬಡ್ಡಿರಹಿತವಾಗಿ ಮುಂದೂಡುವುದಾಗಿ ತಿಳಳಿಸಿದ್ರು. ಇದಲ್ಲದೇ ರಾಜ್ಯದಲ್ಲಿನ 54 ಸಾವಿರ ಕೈಮಗ್ಗ ನೇಕಾರರಿಗೆ ವಾರ್ಷಿಕ 2 ಸಾವಿರ ಬ್ಯಾಂಕ್ ಖಾತೆಗೆ ಜಮೆ ಮಾಡೋದಾಗಿ ಸಿಎಂ ತಿಳಿಸಿದ್ರು..
