Tuesday, July 22, 2025

Latest Posts

ವಲಸಿಗರ ವಿಚಾರದಲ್ಲಿ ಯಡಿಯೂರಪ್ಪ ಎಡವಟ್ಟು ಮಾಡಿದ್ರಾ..?

- Advertisement -

ಕರ್ನಾಟಕ ಟಿವಿ : ರಾಜ್ಯದಿಂದ ವಲಸಿಗರನ್ನ ಕರೆದುಕೊಂಡು ಬಿಹಾರಕ್ಕೆ ತೆರಳಲು ಬುಕ್ ಆಗಿದ್ದ 10 ರೈಲುಗಳನ್ನ ರಾಜ್ಯ ಸರ್ಕಾರ ಕ್ಯಾನ್ಸಲ್ ಮಾಡಿದೆ. ಯಾಕಂದ್ರೆ ಕಾರ್ಮಿಕರೆಲ್ಲ ಅವರ ಊರಿಗೆ ತೆರಳಿದ್ರೆ ಕಟ್ಟಡ ಕಾಮಗಾರಿಗೆ ದೊಡ್ಡ ಮಟ್ಟದ ಹೊಡೆದ ಬೀಳಲಿದೆ ಎಂದು ರಿಯಲ್  ಎಸ್ಟೇಟ್ ಉದ್ಯಮಿಗಳು ಒತ್ತಾಯ ಮಾಡಿದ್ರು ಈ ಹಿನ್ನೆಲೆ ಸಿಎಂ ಸಹ ವಲಸಿಗರನ್ನ ಊರಿಗೆ ತೆರಳದಂತೆ ಮನವಿ ಮಾಡಿದ್ರು.  ಈ ಬೆನ್ನಲ್ಲೇ ಶ್ರಮಿಕ್ ಸ್ಪೆಷಲ್ ರೈಲುಗಳನ್ನ ಕ್ಯಾನ್ಸಲ್ ಮಾಡಲಾಗಿದೆ.

ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಇನ್ನು ಸಿಎಂ ಯಡಿಯೂರಪ್ಪ ವಲಸಿಗರ ಟ್ರೈನ್ ಕ್ಯಾನ್ಸಲ್ ಮಾಡಿರೋದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.. ಯಾರದ್ದೋ ಹಿತ ಕಾಪಾಡಲು ಬಡಪಾಯಿ ಕಾರ್ಮಿಕರನ್ನ ಬಲಿಕೊಡಲಾಗ್ತಿದೆ ಅಂತ ಯಡಿಯೂರಪ್ಪ ನಡೆಯನ್ನ ಟೀಕಿಸಿದ್ದಾರೆ..  ಕೆಲಸವೋ..? ಆರೋಗ್ಯವೇ ಅನ್ನೋದನ್ನ ತೀರ್ಮಾಣ ಮಾಡಲು ವಲಸಿಕ ಕಾರ್ಮಿಕರಿಗೆ ಹಕ್ಕಿದೆ.. ಅವರಿಗೆ ರೈಲು ವ್ಯವಸ್ಥೆ ಮಾಡಿ ಅವರ ಊರಿಗೆ ಕಳುಹಿಸಿ ಅಂತ ಸಿದ್ದರಾಮಯ್ಯ ಸಿಎಂಗೆ ಒತ್ತಾಯಿಸಿದ್ದಾರೆ..

ಸಾವಿರಾರು ಕಿಲೋಮೀಟರ್ ದೂರದ ಉತ್ತರಪ್ರದೇಶಕ್ಕೆ ವಲಸಿಗರು ನಡೆದುಕೊಂಡು ಹೋಗ್ತಿದ್ದಾರೆ.. ಈ ದೃಶ್ಯ ಮನಕಲಕುವಂತಿದೆ..

- Advertisement -

Latest Posts

Don't Miss