Tuesday, December 24, 2024

Latest Posts

Jagadish Shettar : ಬಿಜೆಪಿಗೆ ಹೋಗುವ ಆ ನಾಲ್ಕು ಜನರ ಹೆಸರು ಹೇಳಲಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸವಾಲು

- Advertisement -

Political News : ರಾಜ್ಯ ಸರ್ಕಾರ ಪತನವಾಗುತ್ತೆ ಎಂದು ಯತ್ನಾಳ್ ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಗೆ ಕೆರಳಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲನ್ನು ಹಾಕಿದ್ದಾರೆ.

ರಾಜ್ಯ ಸರ್ಕಾರ‌ ಪತನವಾಗುವ ಬಗ್ಗೆ ಹಾಗೂ 45 ಕಾಂಗ್ರೆಸ್ ಶಾಸಕರು ನಮ್ಮ ಬಳಿ ಇದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದು, ಯತ್ನಾಳ್‌ ಅವರು ಬಿಜೆಪಿಗೆ ಹೋಗುವ ಆ ನಾಲ್ಕು ಜನರ ಹೆಸರು ಹೇಳಲಿ ನೋಡೋಣ ಎಂದು ಸವಾಲ್‌ ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಜಗದೀಶ್ ಶೆಟ್ಟರ್ ರಿಂದ ಬಿಜೆಪಿಗೆ ಏನು ಲಾಭ ಇಲ್ಲ ಎಂದ ಯತ್ನಾಳ್ ಮಾತಿಗೆ ಶೆಟ್ಟರ್ ತಿರುಗೇಟು ನೀಡಿ, ಕಳೆದ ವಿಧಾನ ಸಭಾ ಚುನಾವಣೆಯ ಫಲಿತಾಂಶ ಏನಾಗಿದೆ ಎಲ್ಲರಿಗೂ ಗೊತ್ತಿದೆ‌. 65 ಸೀಟ್ ಗಳು ಯಾಕೆ ಬಂದಿವೆ ಎನ್ನುವುದರ ಬಗ್ಗೆ ಅವರು ಉತ್ತರ ಹೇಳಬೇಕಾಗತ್ತೆ. ಜಗದೀಶ್ ಶೆಟ್ಟರ್ ಏನು ಅಂತ ಜನರಿಗೆ ಗೊತ್ತಿದೆ ಎಂದರು.
ಜಗದೀಶ್ ಶೆಟ್ಟರ್ ಒಬ್ಬರನ್ನ ಸೋಲಿಸಲು ಹೋಗಿ ಇಡೀ ಬಿಜೆಪಿಯನ್ನೇ ಸೋಲಿಸಿದ್ದೀರಾ ಅಂತ ಈಗಾಗಲೇ ಹೇಳಿದ್ದೇನೆ ಎಂದರು. ಇನ್ನು ತಮ್ಮ ಮೇಲೆ ಹಗರಣಗಳಿವೆ ಎಂಬ ಯತ್ನಾಳ್ ಹೇಳಿಕೆಗೆ ಇವೆಲ್ಲ ಹಿಟ್ ಆಂಡ್ ರನ್ ಆಗುತ್ತೆ, ದಾಖಲೆ ಕೊಡೋಕೆ ಎಷ್ಟು ದಿನ ಬೇಕು? ನಾಳೆನೇ ಕೊಡಲಿ ಎಂದರು.

ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯಾತೀತ ಜನತಾದಳ ಪರಸ್ಪರ ಸಹಾಯ ಮಾಡೋಕೆ ಇಬ್ಬರು ಅಸಹಾಯಕರು ಒಟ್ಟಿಗೆ ಕೂಡಿದ್ದಾರೆ. ಎರಡು ಪಕ್ಷಗಳು ಬಲಹೀನ ಆಗಿದ್ದಕ್ಕೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು. ಮೈತ್ರಿಯಿಂದ ಏನಾದರೂ ಲಾಭ ಆಗೋದಾದ್ರೆ ಅದು ಜೆಡಿಎಸ್ ಗೆ ಆಗುತ್ತೆ ಬಿಜೆಪಿಗೆ ಅಲ್ಲ ಎಂದರು.

ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ ಸಂಸದೆ ಸುಮಲತಾ..

Mahesh Tenginakai : ನಿಮಗೆ ಅನ್ಯಾಯವಾಗಿದ್ದರೇ, ತಾಕತ್ ಇದ್ದರೇ ನೀವು ಸರಿಮಾಡಿಕೊಳ್ಳಿ : ಶಾಸಕ ಟೆಂಗಿನಕಾಯಿ

BY Vijayendra : ಬಿಜೆಪಿ ರಾಜ್ಯಾಧ್ಯಕ್ಷ ಆಗ್ತಾರಾ ವಿಜಯೇಂದ್ರ?

- Advertisement -

Latest Posts

Don't Miss