Banglore News : ಬೆಂಗಳೂರಿನಲ್ಲಿ ಅತ್ತಿಗುಪ್ಪೆಯ ಬಂಟರ ಭವನದಲ್ಲಿ ತುಳುನಾಡ ಜವನೆರ್ ಬೆಂಗಳೂರು ಇವರ ವತಿಯಿಂದ ಅಷ್ಟೆಮಿದ ಐಸಿರ ವಿಶೇಷ ಕಾರ್ಯಕ್ರಮ ನಡೆಯಯಲಿದೆ. ಕೃಷ್ಣ ಜನ್ಮಾಷ್ಟಮಿ ಕರಾವಳಿ ಭಾಗದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುವಂತೆ ಬೆಂಗಳೂರಿನಲ್ಲಿಯೂ ಹಲವು ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ, ಹಲಸಿನ ಬೀಜ ಹೆಕ್ಕುವ ಸ್ಪರ್ಧೆ, ನೆನಪಿನ ಶಕ್ತಿ, ಮಡಕೆ ಒಡೆಯುವ ಸ್ಪರ್ಧೆಗಳಿರಲಿದೆ.
ಮಹಿಳೆಯರಿಗೆ ಲಿಂಬೆ ಚಮಚ, ಟೊಂಕ ಓಟ, ಪೊರಕೆ ಮಾಡುವುದು ಮತ್ತು ಮಡಕೆ ಒಡೆಯುವ ಸ್ಪರ್ಧೆಗಳಿರಲಿವೆ. ಪುರುಷರಿಗಾಗಿ ಕಪ್ಪೆ ಜಿಗಿತ, ಅಡ್ಡಕಂಬ ದೀಪ ಸ್ಪರ್ಧೆ, ಗೋಣಿಚೀಲ ಓಟ ಮತ್ತು ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕ ವಿಭಾಗದಲ್ಲಿ ಹುಲ್ಲಿನ ಹಗ್ಗ ಹೊಸೆಯುವುದು, ಅವಲಕ್ಕಿ ತಿನ್ನುವುದು, ತೆಂಗಿನ ಕಾಯಿ ಕುಟ್ಟುವುದು, ಹಗ್ಗ ಜಗ್ಗಾಟ ತುಳುನಾಡಿನ ವಿಚಾರಗಳ ಬಗ್ಗೆ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ.
ಐಸಿರದಲ್ಲಿ ಫ್ಯಾಶನ್ ಶೋ:
ಈ ಸ್ಪರ್ಧೆಗಳ ಜೊತೆಗೆ ಐಸಿರ ಫ್ಯಾಷನ್ ಶೋ ಸ್ಪರ್ಧೆಯೂ ನಡೆಯಲಿದೆ. ಕರಾವಳಿ ಭಾಗದ ವಿಚಾರಗಳನ್ನು ಪ್ರಸ್ತುತ ಪಡಿಸುವ ರೌಂಡ್ ಕೂಡ ಇರಲಿದ್ದು ಹಲವು ವಿಭಾಗಗಳಲ್ಲಿ ಆಕರ್ಷಕ ನಗದು ಬಹುಮಾನಗಳು ಇರಲಿವೆ. ವಿಶೇಷ ಆಕರ್ಷಣೆವಿಶೇಷ ಆಕರ್ಷಣೆಯಾಗಿ ಪಿಲಿ ನಲಿಕೆ ಕಾರ್ಯಕ್ರಮವಿದ್ದು ಅನೇಕ ಕಸರತ್ತುಗಳನ್ನೊಳಗೊಂಡ ಭರ್ಜರಿ ಹುಲಿಕುಣಿತ ದಿನವಿಡೀ ಪ್ರೇಕ್ಷಕರನ್ನು ಸೆಳೆಯಲಿದೆ.
ದೊಂದಿ ಬೆಳಕಿನ ಕರಾವಳಿ ಆಟ:
ಸದ್ಯ ತುಳುನಾಡಿನಲ್ಲೂ ನಡೆಯದೇ ಇರುವ, ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ದೊಂದಿ ಬೆಳಕಿನ ಯಕ್ಷಗಾನ ಬಯಲಾಟ ನಡೆಯಲಿದ್ದು ಧರ್ಮದೈವ ಪಂಜುರ್ಲಿ” ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಮಾಡದ ತಾಲೀಮು ಗೊಬ್ಬು ಎಂಬ ವಿಶೇಷ ತಾಲೀಮು ಪ್ರದರ್ಶನವೂ ದಿನವಿಡೀ ಆಗಮಿಸುವವರಿಗೆ ಮುದ ನೀಡಲಿದೆ.
ಆಹಾರ ಮೇಳ:
ಆಹಾರ ಪ್ರಿಯರಿಗೆ ಉಣಬಡಿಸಲು ಕರಾವಳಿಯ ನೀರುದೋಸೆ, ಪತ್ರೋಡೆ, ಮೂಡೆ, ತೊಜಂಕ್ ವಡೆ, ಕುಡುಬಸಳೆ ಗಸಿ ಸೇರಿದಂತೆ ಹಲವು ಖಾದ್ಯಗಳನ್ನೊಳಗೊಂಡ ಆಹಾರ ಮೇಳವೂ ಇರಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯುಟಿ ಖಾದರ್, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕನ್ನಡ – ತುಳು ಭಾಷೆಯ ಚಿತ್ರನಟರು, ಉದ್ಯಮಿಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.
Nanu Nandini : ಬ್ರೇಕ್ ಇಲ್ಲದೆ ಸಾಗುತ್ತಿದೆ ನಾನು ನಂದಿನಿ ಹಾಡಿನ ವೀಕ್ಷಣೆ : 30 ಮಿಲಿಯನ್ ವೀವ್ಸ್