Wednesday, July 23, 2025

Latest Posts

ಹುಣಸೂರು ತಾಲೂಕಿನ ಮೂರು ಕಡೆ ಸರ ಕಳ್ಳತನ: ಆತಂಕದಲ್ಲಿ ಜನರು.

- Advertisement -

ಹುಣಸೂರು: ತಾಲೂಕಿನ ಮೋದೂರಿನ ವೃದ್ದೆ ಶಿವಮ್ಮ(70), ಅರಸು ಕಲ್ಲಹಳ್ಳಿಯ ವೃದ್ದೆ ಪುಟ್ಟಮ್ಮ(68) ಹಾಗೂ ವಡೇರಹೊಸಹಳ್ಳಿಯ ಅಂಬುಜಾ(25) ಒಡವೆಗಳನ್ನು ಕಳೆದುಕೊಂಡವರು.

ಘಟನೆಯ ವಿವರ: ಬೈಕಿನಲ್ಲಿ ಬಂದ ಸುಮಾರು 25-30 ವರ್ಷದ ಅಪರಿಚಿತ ವ್ಯಕ್ತಿಯೋರ್ವ ಎಲ್ಲೆಡೆ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರನ್ನು ಹತ್ತಿರ ಕರೆದು, ಹತ್ತಿರ ಬರುತ್ತಿದ್ದಂತೆ ಹೆದರಿ ಓಡುತ್ತಿದ್ದ ಇಬ್ಬರು ವೃದ್ದೆಯರಿಗೆ ಕಣ್ಣಿಗೆ ಖಾರದಪುಡಿ ಎರಚಿ ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡಿರುವ ಘಟನೆ ನಡೆದಿದೆ.

ಪುಟ್ಟಮ್ಮರ ಕಿವಿಯಲ್ಲಿದ್ದ ಓಲೆಯನ್ನು ಕಿತ್ತು ಪರಾರಿಯಾಗಿದ್ದಾನೆ. ಕಿವಿಗೆ ಗಾಯವಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಡೆಯರ ಹೊಸಹಳ್ಳಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಂಬುಜಾ ಅವರ ಬಳಿ ಬಂದು ಸ್ವಾಮಿಗೌಡರ ಜಮೀನು ಯಾವುದೆಂದು ಕೇಳಿ ಹತ್ತಿರ ಬರುತ್ತಿದ್ದಂತೆ ಹೆದರಿದ ಅಂಬುಜಾ ಓಡಿ ಹೋದರೂ ಬೆನ್ನಟ್ಟಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕೀಳಲು ನಡೆಸಿದ ಪ್ರಯತ್ನ ವಿಫಲವಾಗಿ ತಾಳಿ, ಗುಂಡು ಮಾತ್ರ ಕೀಳಲು ಸಫಲನಾಗಿದ್ದಾನೆ. ಈಕೆಯ ಕೂಗಾಟ ಕೇಳಿ ಪಕ್ಕದ ಜಮೀನಿನಲ್ಲಿದ್ದ ರೈತರೊಬ್ಬರು ಓಡಿ ಬರುವಷ್ಟರಲ್ಲಿ ಬೈಕ್ ಏರಿ ಪರಾರಿಯಾಗಿದ್ದಾನೆ.

ಮೋದೂರು, ಕೊತ್ತೆಗಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಹಾಗೂ ವಡೆಯರಹೊಸಹಳ್ಳಿಯ ಪ್ರಕರಣ ಬಿಳಿಕೆರೆ ಠಾಣೆಯಲ್ಲೂ ದಾಖಲಾಗಿದ್ದು, ಸ್ಥಳಕ್ಕೆ ಇನ್ಸ್ ಪೆಕ್ಟರ್‌ಗಳಾದ ಸಿ.ವಿ.ರವಿ ಹಾಗೂ ಲೋಲಾಕ್ಷಿ ಭೇಟಿ ನೀಡಿ ಪರಿಶೀಲಿಸಿದ್ದಾರೆ

ಉಪ್ಪಾರ ಸಮುದಾಯದವರಿಂದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ..!

ತುಮಕೂರಿನ ಚಿಕ್ಕನಾಯಕನಹಳ್ಳಿ ಜೆ.ಡಿ.ಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯೆ.

ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ತರಹೇವಾರಿ ಬ್ಯಾಗ್ ಸೇಲ್…

- Advertisement -

Latest Posts

Don't Miss