ರಾಜಕೀಯ ಸುದ್ದಿ: ವಿವಿಧ ಪಕ್ಷದ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವುದಕ್ಕೆ ಡಿಸಿಎಂ ಡಿಕೆ ನಾಯಕರಿಗೆ ಶುಭ ಹಾರೈಸಿ ಆತ್ಮೀಯವಾಗಿ ಸ್ವಾಗತಿಸಿದರು. ಹಾಗೂ ಟ್ವೀಟ್ ಮೂಲಕ ಡಿಸಿಎಂ ಖುಷಿಯನ್ನು ಹಂಚಿಕೊಂಡರು.
ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಪಕ್ಷ ಬದಲಾವಣೆಯ ಪರ್ವ ಜೋರಾಗಿದ್ದು ವಿವಿಧ ಪಕ್ಷದ ಸದಸ್ಯರು, ವಾರ್ಡ್ ಮೆಂಬರ್ ಗಳು , ಕಾರ್ಪೊರೇಟರ್ ಗಳು, ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಅದೇ ರೀತಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಇದರ ಖಷಿಯನ್ನು ಡಿಸಿಎಂ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪದ್ಮನಾಭನಗರದ ವಿವಿಧ ಪಕ್ಷದ ಕಾರ್ಯಕರ್ತರು ಇಂದು ನಮ್ಮ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ಸದಾಶಿವ ನಗರದ ನನ್ನ ನಿವಾಸದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿ ಶುಭ ಹಾರೈಸಿದೆ ಎಂದು ಟ್ವೀಟ್ ಮೂಲಕ ತಿಳಿಸಿದರು.